×
Ad

ಭಾರತೀಯ ಐಟಿ ಸಂಸ್ಥೆಗಳಿಗೆ ಎಚ್-1ಬಿ ವೀಸಾ ಅನುಮೋದನೆ ಕನಿಷ್ಠ ಮಟ್ಟಕ್ಕೆ ಕುಸಿತ

Update: 2025-12-01 22:17 IST

ಸಾಂದರ್ಭಿಕ ಚಿತ್ರ | Photo Credit : freepik


ವಾಷಿಂಗ್ಟನ್, ಡಿ.1: ಹಾಲಿ (2025) ಆರ್ಥಿಕ ವರ್ಷದಲ್ಲಿ ಭಾರತೀಯ ಐಟಿ ಸಂಸ್ಥೆಗಳಿಗೆ ಅಮೆರಿಕಾದಿಂದ ಎಚ್-1ಬಿ ವೀಸಾ ಅನುಮೋದನೆಯಲ್ಲಿ ತೀವ್ರ ಕುಸಿತ ದಾಖಲಾಗಿದೆ. ಆರಂಭಿಕ ಉದ್ಯೋಗಕ್ಕಾಗಿ ಕೇವಲ 4,573 ಹೊಸ ಅರ್ಜಿಗಳನ್ನು ಅನುಮೋದಿಸಲಾಗಿದ್ದು ಇದು 2015ಕ್ಕೆ ಹೋಲಿಸಿದರೆ ಸುಮಾರು 70%, 2024ಕ್ಕೆ ಹೋಲಿಸಿದರೆ 37% ಇಳಿಕೆಯಾಗಿದೆ ಎಂದು ವರದಿಯಾಗಿದೆ.

ಎಚ್-1ಬಿ ಅನುಮೋದನೆಯ ವಿಷಯದಲ್ಲಿ ಭಾರತೀಯ ಸಂಸ್ಥೆಗಳಿಗೆ 2025 ಅತ್ಯಂತ ಕೆಟ್ಟ ವರ್ಷವಾಗಿದೆ ಎಂದು `ದಿ ನ್ಯಾಷನಲ್ ಫೌಂಡೇಷನ್ ಫಾರ್ ಅಮೆರಿಕನ್ ಪಾಲಿಸಿ(ಎನ್‍ಎಫ್‍ಎಪಿ) ವರದಿ ಮಾಡಿದೆ. ಭಾರತೀಯ ಸಂಸ್ಥೆಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಮಾತ್ರ ಹೊಸ ಎಚ್-1ಬಿ ವೀಸಾ ಅನುಮೋದನೆ ಪಡೆದ ಅಗ್ರ ಐದು ಸಂಸ್ಥೆಗಳಲ್ಲಿ ಸ್ಥಾನ ಉಳಿಸಿಕೊಂಡಿದೆ. ವಲಸೆ ನೀತಿ ಬಿಗಿಗೊಳಿಸಿರುವುದು, ವೀಸಾ ಅರ್ಜಿಗಳ ಕಟ್ಟುನಿಟ್ಟಿನ ಪರಿಶೀಲನೆ ಮತ್ತು ನೇಮಕಾತಿ ಮಾದರಿಗಳಲ್ಲಿ ವಿಶಾಲವಾದ ಬದಲಾವಣೆ ವೀಸಾ ಅನುಮೋದನೆಯಲ್ಲಿ ತೀವ್ರ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಇಮ್ರಾನ್ ಖಾನ್‍ರನ್ನು ಬಂಧನದಲ್ಲಿಟ್ಟಿರುವ ಅಡಿಯಾಲಾ ಜೈಲಿನ ಹೊರಗೆ ಖೈಬರ್ ಪಖ್ತೂಂಕ್ವಾ ಪ್ರಧಾನಿ ಸೊಹೈಲ್ ಅಫ್ರಿದಿ ನೇತೃತ್ವದಲ್ಲಿ ಪಿಟಿಐ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News