×
Ad

ರಶ್ಯಾದ ಕೈದಿಗಳ ಮಾಹಿತಿ ಕದ್ದ ಹ್ಯಾಕರ್‌ ಗಳು | ನವಾಲ್ನಿ ಸಾವಿಗೆ ಪ್ರತೀಕಾರ ?

Update: 2024-04-01 22:28 IST

ನವಾಲ್ನಿ | Photo: hindustantimes.com

ಮಾಸ್ಕೋ: ಸೂಕ್ಷ್ಮ ಮಾಹಿತಿಗಳನ್ನು ಒಳಗೊಂಡ ರಶ್ಯದ ಬೃಹತ್ ಜೈಲು ಡೇಟಾಬೇಸ್(ರಚನಾತ್ಮಕ ಮಾಹಿತಿಯ ಸಂಘಟಿತ ಸಂಗ್ರಹ)ಗೆ ಹ್ಯಾಕರ್‌ ಗಳು ಕನ್ನ ಹಾಕಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್ ವರದಿ ಮಾಡಿದೆ.

ಇತ್ತೀಚೆಗೆ ಜೈಲಿನಲ್ಲಿ ಮೃತಪಟ್ಟ ರಶ್ಯದ ವಿರೋಧ ಪಕ್ಷದ ಮುಖಂಡ ಅಲೆಕ್ಸಿ ನವಾಲ್ನಿಯ ಸಾವಿಗೆ ಸೇಡು ತೀರಿಸಿಕೊಳ್ಳಲು ಸರಕಾರಿ ವಿರೋಧಿ ಸೈಬರ್‍ಕ್ರಿಮಿನಲ್‍ಗಳು ನಡೆಸಿರುವ ಕೃತ್ಯ ಇದಾಗಿದೆ ಎಂದು ಶಂಕಿಸಲಾಗಿದೆ.

ರಶ್ಯದ ಜೈಲುವ್ಯವಸ್ಥೆಯೊಂದಿಗೆ ಸಂಪರ್ಕದಲ್ಲಿರುವ ಕಂಪ್ಯೂಟರ್ ನೆಟ್‍ವರ್ಕ್ ಬಳಸಿ ಹ್ಯಾಕ್ ಮಾಡಲಾದ ಜೈಲು ಗುತ್ತಿಗೆದಾರರ ವೆಬ್‍ಸೈಟ್‍ನಲ್ಲಿ ನವಾಲ್ನಿಯ ಫೋಟೊ ಹಾಕಲಾಗಿದೆ. ಫೋಟೋದ ಕೆಳಗೆ `ಅಲೆಕ್ಸಿ ನವಾಲ್ನಿ ಚಿರಾಯುವಾಗಲಿ' ಎಂಬ ಸಂದೇಶವಿದೆ. ಜತೆಗೆ ನವಾಲ್ನಿ ತನ್ನ ಪತ್ನಿ ಯೂಲಿಯಾ ಜತೆ ಭಾಗವಹಿಸಿದ್ದ ರಾಜಕೀಯ ರ‍್ಯಾಲಿಯೊಂದರ ಫೋಟೊವನ್ನು ಸ್ಕ್ರೀನ್‍ಷಾಟ್‍ನಲ್ಲಿ ಬಳಸಲಾಗಿದೆ. ವೆಬ್‍ಸೈಟ್‍ಗೆ ಕನ್ನ ಹಾಕಿದ್ದು ಮಾತ್ರವಲ್ಲ, 8 ಲಕ್ಷಕ್ಕೂ ಅಧಿಕ ರಶ್ಯನ್ ಕೈದಿಗಳ ಮಾಹಿತಿಯನ್ನು ಒಳಗೊಂಡ ಡೇಟಾಬೇಸ್ ಕೂಡಾ ಹ್ಯಾಕರ್‌ ಗಳ ವಶವಾಗಿದೆ ಎಂದು ವರದಿ ಹೇಳಿದೆ. ರಶ್ಯನ್ ಜೈಲುಗಳ ಆನ್‍ಲೈನ್ ಅಂಗಡಿಗಳಲ್ಲಿ ಮಾರುವ ವಸ್ತುಗಳ ಬೆಲೆಯನ್ನೂ ಹ್ಯಾಕರ್‌ ಗಳು ಮಾರ್ಪಡಿಸಿದ್ದು ಅತೀ ಕಡಿಮೆ ಬೆಲೆ ನಮೂದಿಸಿರುವುದರಿಂದ ಆನ್‍ಲೈನ್ ಖರೀದಿ ಭರದಿಂದ ಸಾಗಿದೆ. ಸಿಬಂದಿಗಳಿಗೆ ಈ ಮಾಹಿತಿ ತಿಳಿಯುವಾಗ ತುಂಬಾ ತಡವಾಗಿದ್ದು ಭಾರೀ ನಷ್ಟ ಸಂಭವಿಸಿದೆ. ಸೈಬರ್‍ಭದ್ರತಾ ತಜ್ಞರು ಸೋರಿಕೆಯಾದ ಡೇಟಾದ ಸತ್ಯಾಸತ್ಯತೆಯನ್ನು ದೃಢಪಡಿಸಿದ್ದಾರೆ. ನವಾಲ್ನಿಯ ಸಾವಿಗೆ ರಶ್ಯ ಸರಕಾರ ಕಾರಣ ಎಂದು ಅವರ ಬೆಂಬಲಿಗರು, ಸಂಬಂಧಿಕರು ಹಾಗೂ ಪಾಶ್ಚಿಮಾತ್ಯ ಮುಖಂಡರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News