×
Ad

ಮತ್ತೊಬ್ಬ ಒತ್ತೆಯಾಳುವಿನ ಮೃತದೇಹ ರೆಡ್ ಕ್ರಾಸ್ ಗೆ ಹಸ್ತಾಂತರ: ಹಮಾಸ್

Update: 2025-10-18 21:56 IST

Photo Credit : NDTV

ಗಾಝಾ, ಅ.18: ಗಾಝಾದಲ್ಲಿ ಮತ್ತೊಬ್ಬ ಇಸ್ರೇಲಿ ಒತ್ತೆಯಾಳುವಿನ ಮೃತದೇಹ ಶುಕ್ರವಾರ ಪತ್ತೆಯಾಗಿದ್ದು ಅದನ್ನು ಅಂತರಾಷ್ಟ್ರೀಯ ರೆಡ್ ಕ್ರಾಸ್ ಗೆ ಹಸ್ತಾಂತರಿಸಲಾಗಿದೆ ಎಂದು ಹಮಾಸ್ ಹೇಳಿದೆ.

ಕದನ ವಿರಾಮ ಒಪ್ಪಂದವನ್ನು ಎತ್ತಿಹಿಡಿಯುವ ಪ್ರಯತ್ನದ ಭಾಗವಾಗಿ ಯುದ್ಧದಿಂದ ಜರ್ಝರಿತಗೊಂಡಿರುವ ಗಾಝಾದಲ್ಲಿ ಕಟ್ಟಡಗಳ ಅವಶೇಷಗಳ ರಾಶಿಯಡಿ ಬುಲ್ಡೋಝರ್ ಗಳನ್ನು ಬಳಸಿ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಯಾದ ಮೃತದೇಹದ ಅವಶೇಷಗಳನ್ನು ಗಾಝಾ ಪಟ್ಟಿಯಲ್ಲಿ ರೆಡ್ ಕ್ರಾಸ್ ಗೆ ಹಸ್ತಾಂತರಿಸಲಾಗಿದೆ. ಇದಕ್ಕೂ ಮುನ್ನ 10 ಮೃತದೇಹಗಳನ್ನು ಹಸ್ತಾಂತರಿಸಿರುವುದಾಗಿ ಹಮಾಸ್ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ಆದರೆ ಇದರಲ್ಲಿ ಒಂದು ಮೃತದೇಹ ಒತ್ತೆಯಾಳುವಿನದ್ದಲ್ಲ ಎಂದು ಇಸ್ರೇಲ್ ಸರಕಾರ ಹೇಳಿತ್ತು. ರೆಡ್ ಕ್ರಾಸ್ ಶನಿವಾರ ಒತ್ತೆಯಾಳುವಿನ ಮೃತದೇಹದ ಅವಶೇಷಗಳನ್ನು ಹಸ್ತಾಂತರಿಸಿದ್ದು ಅದನ್ನು ಮರಣೋತ್ತರ ಪರೀಕ್ಷೆಗಾಗಿ ರಾಷ್ಟ್ರೀಯ ವಿಧಿವಿಜ್ಞಾನ ಸಂಸ್ಥೆಗೆ ಕಳುಹಿಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News