×
Ad

ರೆಡ್ ಕ್ರಾಸ್ ಗೆ ಇಬ್ಬರು ಒತ್ತೆಯಾಳುಗಳ ಮೃತದೇಹಗಳನ್ನು ಹಸ್ತಾಂತರಿಸಿದ ಹಮಾಸ್

Update: 2025-10-30 22:28 IST

Photo Credit : aljazeera.com

ಗಾಝಾ: ರೆಡ್ ಕ್ರಾಸ್ ಗೆ ಹಮಾಸ್ ನಿಂದ ಹಸ್ತಾಂತರಗೊಂಡಿದ್ದ ಇಬ್ಬರು ಒತ್ತೆಯಾಳುಗಳ ಮೃತದೇಹಗಳನ್ನು ಇಸ್ರೇಲ್ ಸ್ವೀಕರಿಸಿದೆ. ಮೃತದೇಹಗಳನ್ನು ಗುರುತಿಸಲು ಇಸ್ರೇಲ್ ನ ರಾಷ್ಟ್ರೀಯ ವಿಧಿವಿಜ್ಞಾನ ಸಂಸ್ಥೆಗೆ ಕಳುಹಿಸಲಾಗುತ್ತಿದೆ.

ಕದನ ವಿರಾಮವನ್ನು ಉಲ್ಲಂಘಿಸಿ ಇಸ್ರೇಲ್‌ ದಾಳಿ ನಡೆಸಿರುವುದರಿಂದ ಬುಧವಾರ ಗಾಝಾದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಫೆಲೆಸ್ತೀನ್‌ ನಾಗರಿಕರು ಮೃತಪಟ್ಟಿದ್ದಾರ. ಹೀಗಾಗಿ, ಫೆಲೆಸ್ತೀನ್‌ ಜನರು ಕದನ ವಿರಾಮದ ಬಗ್ಗೆ ತಮ್ಮ ಭರವಸೆ ಕಳೆದುಕೊಳ್ಳುತ್ತಿದ್ದಾರೆ.

ಒತ್ತೆಯಾಳುಗಳ ಮೃತದೇಹದ ಹಸ್ತಾಂತರವನ್ನು ದೃಢಪಡಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿ, ಇಸ್ರೇಲ್ ಸೇನೆ ಮತ್ತು ಶಿನ್ ಬೆಟ್ ಗೆ ಹಸ್ತಾಂತರಿಸಲಾಗಿರುವ ಒತ್ತೆಯಾಳುಗಳ ಮೃತದೇಹಗಳನ್ನು ಇಸ್ರೇಲ್ ಗೆ ತರಲಾಗುವುದು ಎಂದು ಹೇಳಿದೆ.

“ಅಪಹರಣಕ್ಕಿಡಾಗಿರುವ ನಮ್ಮ ಪ್ರಜೆಗಳನ್ನು ಮರಳಿ ಕರೆತರುವ ಪ್ರಯತ್ನಗಳು ನಿರಂತರವಾಗಿ ಮುಂದುವರಿಯಲಿದ್ದು, ಅಪಹೃತವಾಗಿರುವ ಪ್ರತಿ ವ್ಯಕ್ತಿ ಮರಳಿ ಬರುವವವರೆಗೂ ನಮ್ಮ ಪ್ರಯತ್ನ ನಿಲ್ಲುವುದಿಲ್ಲ” ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News