ಅಮೆರಿಕಾದಲ್ಲಿ ಆಂಧ್ರಪ್ರದೇಶ ಮೂಲದ ಯುವಕನ ಗುಂಡಿಕ್ಕಿ ಹತ್ಯೆ
Update: 2025-01-20 15:17 IST
ರವಿತೇಜ (Photo credit: NDTV)
ವಾಶಿಂಗ್ಟನ್: 26 ವರ್ಷದ ಹೈದರಾಬಾದ್ ಯುವಕನೊಬ್ಬನನ್ನು ಪೆಟ್ರೋಲ್ ಸ್ಟೇಶನ್ ಬಳಿ ಹಂತಕರು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಸೋಮವಾರ ವಾಶಿಂಗ್ಟನ್ ಡಿಸಿಯಲ್ಲಿ ನಡೆದಿದೆ. ಮೃತ ಯುವಕನನ್ನು ರವಿತೇಜ ಎಂದು ಗುರುತಿಸಲಾಗಿದ್ದು, ಹೈದರಾಬಾದ್ ನ ಆರ್ಕೆಪುರಂ ಗ್ರೀನ್ ಹಿಲ್ಸ್ ಕಾಲನಿ ನಿವಾಸಿಯಾಗಿದ್ದಾನೆ. ಆತ ತನ್ನ ಸ್ನಾತಕೋತ್ತರ ಪದವಿ ಪೂರೈಸಲು ಮಾರ್ಚ್ 2022ರಲ್ಲಿ ಅಮೆರಿಕಗೆ ತೆರಳಿದ್ದ ಎನ್ನಲಾಗಿದೆ.
ತನ್ನ ಪದವಿ ಮುಗಿದ ನಂತರ, ಯುವಕನು ಉದ್ಯೋಗವೊಂದಕ್ಕೆ ಹುಡುಕಾಟ ನಡೆಸುವಾಗ ಈ ಘಟನೆ ನಡೆದಿದೆ.
ಸ್ಥಳೀಯ ಪೊಲೀಸರು ಈ ದಾಳಿಯ ಹಿಂದಿನ ಕಾರಣವನ್ನು ತನಿಖೆ ನಡೆಸುತ್ತಿದ್ದು, ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.