×
Ad

ಮಾಲ್ದೀವ್ಸ್‌ನಿಂದ ಸೇನೆಯನ್ನು ಹಿಂಪಡೆಯಲು ಭಾರತ ಒಪ್ಪಿಗೆ

Update: 2023-12-03 22:28 IST

Photo- PTI

ದುಬಾಯಿ: ಮಾಲ್ದೀವ್ಸ್‌ನಿಂದ ಸೇನೆಯನ್ನು ಹಿಂದಕ್ಕೆ ಪಡೆಯಲು ಭಾರತ ಸರಕಾರ ಒಪ್ಪಿದೆ ಎಂದು ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು ರವಿವಾರ ಹೇಳಿದ್ದಾರೆ.

ಅಧ್ಯಕ್ಷನಾಗಿ ಆಯ್ಕೆಗೊಂಡರೆ ಮಾಲ್ದೀವ್ಸ್‌ನಲ್ಲಿರುವ ಭಾರತದ ಸುಮಾರು 75 ಯೋಧರನ್ನು ವಾಪಾಸು ಕಳುಹಿಸುವುದಾಗಿ ಚುನಾವಣಾ ಪ್ರಚಾರದಲ್ಲಿ ಮುಯಿಝು ಆಶ್ವಾಸನೆ ನೀಡಿದ್ದರು. ದುಬೈಯಲ್ಲಿ ನಡೆಯುತ್ತಿರುವ ಸಿಒಪಿ28 ಶೃಂಗಸಭೆಯ ನೇಪಥ್ಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜತೆಗಿನ ಮಾತುಕತೆಯಲ್ಲಿ ಯೋಧರನ್ನು ಹಿಂಪಡೆಯಲು ಭಾರತ ಒಪ್ಪಿದೆ. ಅಲ್ಲದೆ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಉನ್ನತ ಮಟ್ಟದ ಸಮಿತಿ ರಚಿಸುವ ಕುರಿತೂ ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಮುಯಿಝು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News