×
Ad

ಕರಾಚಿ ಜೈಲಿನಲ್ಲಿ ಭಾರತೀಯ ಮೀನುಗಾರ ಮೃತ್ಯು

Update: 2025-01-24 21:09 IST

ಸಾಂಧರ್ಬಿಕ ಚಿತ್ರ

ಇಸ್ಲಾಮಾಬಾದ್: 2022ರಲ್ಲಿ ಪಾಕಿಸ್ತಾನದ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದ ಭಾರತೀಯ ಮೀನುಗಾರನೋರ್ವ ಗುರುವಾರ ಕರಾಚಿ ಜೈಲಿನಲ್ಲಿ ಮೃತಪಟ್ಟಿದ್ದು, ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಮೃತಪಟ್ಟ ಮೀನುಗಾರರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಬಾಬು ಕರಾಚಿ ಜೈಲಿನಲ್ಲಿ ಮೃತಪಟ್ಟ ಮೀನುಗಾರ. ಬಾಬು ಅವರ ಶಿಕ್ಷೆ ಅವಧಿ ಮುಗಿದಿದ್ದರೂ ಪಾಕಿಸ್ತಾನದ ಅಧಿಕಾರಿಗಳು ಬಿಡುಗಡೆ ಮಾಡಲಿಲ್ಲ ಎಂದು ಹೇಳಲಾಗಿದೆ.

ಬಾಬು ಓರ್ವರು ಮಾತ್ರವಲ್ಲ ಇನ್ನು ಕೂಡ 180 ಭಾರತೀಯ ಮೀನುಗಾರರು ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿ ಪಾಕಿಸ್ತಾನದ ಜೈಲಿನಿಂದ ಬಿಡುಗಡೆಗೆ ಕಾಯುತ್ತಿದ್ದರು. ಶಿಕ್ಷೆಯ ಅವಧಿ ಮುಗಿದರೂ, ಅವರು ಭಾರತೀಯರೆಂದು ರಾಷ್ಟ್ರೀಯತೆ ದೃಢೀಕರಣ ಮಾಡಿದರೂ ಪಾಕಿಸ್ತಾನದ ಅಧಿಕಾರಿಗಳು ಅವರನ್ನು ಬಿಡುಗಡೆ ಮಾಡಲಿಲ್ಲ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News