ಇಂಡೊನೇಶ್ಯಾ: ಪ್ರವಾಹ, ಭೂಕುಸಿತದಲ್ಲಿ 16 ಮಂದಿ ಮೃತ್ಯು
Update: 2025-01-21 21:24 IST
PC : PTI
ಜಕಾರ್ತ : ಇಂಡೊನೇಶ್ಯಾದ ಮಧ್ಯ ಜಾವಾ ಪ್ರಾಂತದಲ್ಲಿ ಧಾರಾಕಾರ ಮಳೆ, ಪ್ರವಾಹದಿಂದ ಸಂಭವಿಸಿದ ಭೂಕುಸಿತದಿಂದ ಕನಿಷ್ಟ 16 ಮಂದಿ ಸಾವನ್ನಪ್ಪಿದ್ದು ಇತರ 10 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಧಾರಾಕಾರ ಮಳೆಯಿಂದಾಗಿ ಪೆಕಲೊಂಗಾನ್ ನಗರದಲ್ಲಿ ಭೂಕುಸಿತ ಸಂಭವಿಸಿದ್ದು 16 ಮಂದಿ ಸಾವನ್ನಪ್ಪಿದ್ದಾರೆ. ಮೂರು ಮಂದಿ ನಾಪತ್ತೆಯಾಗಿದ್ದು ಹಲವು ಮನೆಗಳು ಮತ್ತು ವಾಹನಗಳಿಗೆ ಹಾನಿಯಾಗಿದೆ. ರಸ್ತೆಗಳಲ್ಲಿ ಕಲ್ಲು ಮಣ್ಣಿನ ರಾಶಿ ಬಿದ್ದಿದ್ದು ಸಂಚಾರ ವ್ಯವಸ್ಥೆಗೆ ತಡೆಯಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಹೆಚ್ಚುವರಿ ಸಿಬ್ಬಂದಿಗಳನ್ನು ರವಾನಿಸಲಾಗಿದೆ ಎಂದು ಮಧ್ಯ ಜಾವಾ ವಿಪತ್ತು ನಿರ್ವಹಣಾ ಏಜೆನ್ಸಿಯ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.