×
Ad

ಮರಳಿದ ಡಯೆಟ್ ಕೋಕ್ ಬಟನ್,ಜಾಕ್ಸನ್ ಭಾವಚಿತ್ರ: ಟ್ರಂಪ್ ಓವಲ್ ಕಚೇರಿಯಲ್ಲಿ ಪ್ರಮುಖ ಬದಲಾವಣೆಗಳು

Update: 2025-01-22 18:01 IST

ಡೊನಾಲ್ಡ್ ಟ್ರಂಪ್ | PC : X/@kgrivera

ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಮರಳಿ ಅಧಿಕಾರದ ಗದ್ದುಗೆಯನ್ನೇರಿರುವ ಡೊನಾಲ್ಡ್ ಟ್ರಂಪ್ ಮೊದಲ ದಿನವೇ ತನ್ನ ಓವಲ್ ಕಚೇರಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದ್ದಾರೆ.

ಕಚೇರಿಯಲ್ಲಿ ಈಗ ಆ್ಯಂಡ್ರೂ ಜಾಕ್ಸನ್ ಭಾವಚಿತ್ರ ಕಾಣಿಸಿಕೊಂಡಿದೆ. ಜಾಕ್ಸನ್ ಗುಲಾಮರ ಮಾಲಿಕರಾಗಿದ್ದರು ಮತ್ತು ಮೂಲನಿವಾಸಿ ಅಮೆರಿಕನ್ನರನ್ನು ಬಲವಂತದಿಂದ ಅವರ ಭೂಮಿಯಿಂದ ತೆರವುಗೊಳಿಸಲು ಕಾರಣರಾಗಿದ್ದರು ಎಂಬ ಕಾರಣದಿಂದ ಅವರ ಭಾವಚಿತ್ರವು ಈ ಹಿಂದೆ ವಿವಾದವನ್ನು ಸೃಷ್ಟಿಸಿತ್ತು.

ಓವಲ್ ಕಚೇರಿಯಲ್ಲಿ ಜಾರ್ಜ್ ವಾಷಿಂಗ್ಟನ್,ಅಲೆಕ್ಸಾಂಡರ್ ಹ್ಯಾಮಿಲ್ಟನ್ ಮತ್ತು ಥಾಮಸ್ ಜೆಫರ್ಸನ್ ಅವರ ಚಿತ್ರಗಳನ್ನೂ ಪ್ರದರ್ಶಿಸಲಾಗಿದೆ.

ವಿನ್‌ಸ್ಟನ್ ಚರ್ಚಿಲ್ ಅವರ ಎದೆಮಟ್ಟದ ಪ್ರತಿಮೆಯು ತನ್ನ ಹಿಂದಿನ ಸ್ಥಾನಕ್ಕೆ ಮರಳಿದ್ದರೆ,ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರ ಪ್ರತಿಮೆ ಯಥಾಸ್ಥಿತಿಯಲ್ಲಿ ಉಳಿದುಕೊಂಡಿದೆ. ಬೈಡೆನ್ ಅಧಿಕಾರಾವಧಿಯಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾಗಿದ್ದ ರಾಬರ್ಟ್ ಎಫ್.ಕೆನೆಡಿ ಅವರ ಪ್ರತಿಮೆಯನ್ನು ಟ್ರಂಪ್ ತೆಗೆದುಹಾಕಿದ್ದಾರೆ.

ಫ್ರೆಡ್ರಿಕ್ ರೆಮಿಂಗ್ಟನ್ ಅವರ ಶಿಲ್ಪ ಕಲಾಕೃತಿ ‘ದಿ ಬ್ರಾಂಕೊ ಬಸ್ಟರ್’ ಮತ್ತೆ ಅಧ್ಯಕ್ಷರ ಕಚೇರಿಗೆ ಮರಳಿದೆ.

ಅಗ್ಗಿಷ್ಟಿಕೆಯ ಕವಚದ ಮೇಲೆ ಹದ್ದಿನ ಬೆಳ್ಳಿಯ ಸಣ್ಣ ಪ್ರತಿಮೆಗಳು ಮತ್ತು ತನ್ನ ಹೆಸರಿನೊಂದಿಗೆ ಚೌಕಾಕಾರದ ಪೇಪರ್ ವೇಟ್ ಸೇರಿದಂತೆ ವೈಯಕ್ತಿಕ ಸ್ಪರ್ಶಗಳನ್ನು ಟ್ರಂಪ್ ಕಚೇರಿಗೆ ನೀಡಿದ್ದಾರೆ.

ಕುಟುಂಬ ಚಿತ್ರಗಳನ್ನು ಪ್ರದರ್ಶಿಸಲಾಗಿದ್ದು,ಮಕ್ಕಳು ಮತ್ತು ಪತ್ನಿ ಮೆಲಾನಿಯಾ ಟ್ರಂಪ್ ಅವರು ತಮ್ಮ ಮಗ ಬ್ಯಾರನ್ ಪುಟ್ಟವನಿದ್ದಾಗ ಜೊತೆಯಲ್ಲಿ ತೆಗೆಸಿಕೊಂಡಿದ್ದ ಚಿತ್ರಗಳು ಇವುಗಳಲ್ಲಿ ಸೇರಿವೆ.

ಟ್ರಂಪ್ ಮೊದಲ ಅಧಿಕಾರಾವಧಿಯಲ್ಲಿನ ಚಿನ್ನದ ಪರದೆಗಳು ಉಳಿದುಕೊಂಡಿದ್ದರೆ,ಬಿಡೆನ್‌ರ ನೀಲಿ ರಗ್‌ನ ಸ್ಥಾನದಲ್ಲಿ ರೊನಾಲ್ಡ್ ರೇಗನ್ ಬಳಸಿದ್ದ ತಟಸ್ಥ ವರ್ಣದ ರಗ್‌ನ್ನು ಅಳವಡಿಸಲಾಗಿದೆ.

ಸಾಂಪ್ರದಾಯಿಕ ‘ಡಯೆಟ್ ಕೋಕ್’ ಬಟನ್ ಓವಲ್ ಕಚೇರಿಗೆ ಮರಳಿದೆ. ಈ ಬಟನ್ ಟ್ರಂಪ್ ನೆಚ್ಚಿನ ಪಾನೀಯವಾದ ಡಯೆಟ್ ಕೋಕ್‌ನ್ನು ನೀಡುವಂತೆ ಶ್ವೇತಭವನದ ಬಟ್ಲರ್‌ಗಳಿಗೆ ಸೂಚಿಸುತ್ತದೆ.

ಓವಲ್ ಕಚೇರಿಯ ಹೊರಗಿದ್ದ ಬಿಡೆನ್ ಅವರ ಚಾಕಲೇಟ್-ಚಿಪ್ ಕುಕಿಗಳ ಬದಲು ಹೂವುಗಳನ್ನು ಮತ್ತು ಟ್ರಂಪ್ ಎಂದು ಕೆತ್ತಲಾಗಿರುವ ಚಿನ್ನದ ಪೇಪರ್ ವೇಟ್ ಇರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News