×
Ad

ಯುದ್ಧದಲ್ಲಿ ಅಮೆರಿಕ ಪಾಲ್ಗೊಂಡರೆ ಎಲ್ಲರಿಗೂ ಅಪಾಯ: ಇರಾನ್ ಎಚ್ಚರಿಕೆ

Update: 2025-06-21 19:38 IST

ಅಬ್ಬಾಸ್ ಅರಾಘ್ಚಿ | PC : X \ @IranNewsX

ಟೆಹ್ರಾನ್: ಇರಾನ್-ಇಸ್ರೇಲ್ ಯುದ್ಧದಲ್ಲಿ ಅಮೆರಿಕ ಪಾಲ್ಗೊಂಡರೆ ಅದು ಎಲ್ಲರಿಗೂ ಅತ್ಯಂತ ಅಪಾಯಕಾರಿಯಾಗಲಿದೆ ಎಂದು ಇರಾನ್‌ ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಶನಿವಾರ ಎಚ್ಚರಿಕೆ ನೀಡಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಆಕ್ರಮಣ ಕೊನೆಗೊಂಡರೆ ಮತ್ತು ತಾನು ನಡೆಸಿದ ಅಪರಾಧಕ್ಕೆ ಆಕ್ರಮಣಕಾರನನ್ನು ಹೊಣೆಯಾಗಿಸಿದರೆ ರಾಜತಾಂತ್ರಿಕ ಮಾರ್ಗವನ್ನು ಪರಿಗಣಿಸಲು ಇರಾನ್ ಸಿದ್ಧವಿದೆ. ಆದರೂ ಅಮೆರಿಕ ಯುದ್ಧದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಆರಂಭಿಸಿದರೆ ಅದು ತುಂಬಾ ದುರದೃಷ್ಟಕರ ಎಂದವರು ಹೇಳಿರುವುದಾಗಿ ವರದಿಯಾಗಿದೆ.

ಇಸ್ರೇಲ್-ಇರಾನ್ ನಡುವಿನ ಸಂಘರ್ಷ ಶನಿವಾರ ಎರಡನೇ ವಾರಕ್ಕೆ ಕಾಲಿರಿಸಿದ್ದು ಎರಡೂ ದೇಶಗಳೂ ಪರಸ್ಪರ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ತೀವ್ರಗೊಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News