ಇರಾನ್‌ನ ಕ್ಷಿಪಣಿ ಕಾರ್ಯಕ್ರಮಗಳಿಗೆ ತಂತ್ರಜ್ಞಾನ ಪೂರೈಕೆ : ಭಾರತದ ಸಂಸ್ಥೆಗೆ ಅಮೆರಿಕ ನಿರ್ಬಂಧ
Photo Credit : NDTV
ವಾಷಿಂಗ್ಟನ್, ನ.13: ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಡ್ರೋನ್ ಕಾರ್ಯಕ್ರಮಗಳಿಗೆ ವಸ್ತುಗಳನ್ನು ಮತ್ತು ತಂತ್ರಜ್ಞಾನವನ್ನು ಪೂರೈಸಿರುವುದಕ್ಕೆ ಭಾರತ ಸೇರಿದಂತೆ 8 ರಾಷ್ಟ್ರಗಳ 32 ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಅಮೆರಿಕಾ ನಿರ್ಬಂಧ ಜಾರಿಗೊಳಿಸಿರುವುದಾಗಿ ವರದಿಯಾಗಿದೆ.
ನಿರ್ಬಂಧಕ್ಕೆ ಗುರಿಯಾದವರಲ್ಲಿ ಚಂಡೀಗಢ ಮೂಲದ `ಫಾರ್ಮ್‍ಲೇನ್ ಪ್ರೈ. ಲಿ. ಸಂಸ್ಥೆಯೂ ಸೇರಿದೆ. ಸಂಸ್ಥೆಯ ನಿರ್ದೇಶಕ ಯುಎಇ ಮೂಲದ ಮಾರ್ಕೊ ಕ್ಲಿಂಗ್ ಅವರು ನಿರ್ಬಂಧಗಳ ದಾಖಲೆಯಲ್ಲಿ ಪಟ್ಟಿ ಮಾಡಲಾಗಿರುವ ಪ್ರಮುಖ ವ್ಯಕ್ತಿಯಾಗಿದ್ದಾರೆ ಎಂದು ಅಮೆರಿಕಾದ ಹಣಕಾಸು ಇಲಾಖೆ ಹೇಳಿದೆ. ಇರಾನಿನ ಕ್ಷಿಪಣಿ ಕಾರ್ಯಕ್ರಮಗಳಿಗೆ ಬಳಕೆಯಾಗುವ ವಸ್ತುಗಳನ್ನು ಭಾರತ ಮತ್ತು ಚೀನಾದಿಂದ ಸಂಗ್ರಹಿಸಿ ಇರಾನ್‍ಗೆ ತಲುಪಿಸುವಲ್ಲಿ ಮಾರ್ಕೊ ಕ್ಲಿಂಗ್ ಪಾತ್ರ ವಹಿಸಿದ್ದಾರೆ. ಅಧ್ಯಕ್ಷ ಟ್ರಂಪ್ ನಿರ್ದೇಶನದಡಿ ನಾವು ಪರಮಾಣು ಬೆದರಿಕೆಯನ್ನು ಕೊನೆಗೊಳಿಸಲು ಇರಾನಿನ ಮೇಲೆ ಗರಿಷ್ಠ ಒತ್ತಡ ಹೇರುತ್ತಿದ್ದೇವೆ ಎಂದು ಹೇಳಿಕೆ ತಿಳಿಸಿದೆ.