×
Ad

ಪಾಕಿಸ್ತಾನದ ಜೈಶ್ ಅಲ್ ಆದಿಲ್ ನೆಲೆ ಮೇಲೆ ಇರಾನ್ ಬಾಂಬ್ ದಾಳಿ: ಇಬ್ಬರು ಮಕ್ಕಳು ಮೃತ್ಯು

Update: 2024-01-17 10:04 IST

Photo: twitter.com/TimesAlgebraIND

ಹೊಸದಿಲ್ಲಿ: ಪಾಕಿಸ್ತಾನದ ಜೈಶ್ ಅಲ್ ಅದಿಲ್ ನೆಲೆ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇರಾನ್ ನಡೆಸಿದ ಈ ಕಾನೂನುಬಾಹಿರ ವಾಯುದಾಳಿಯಿಂದ ಇಬ್ಬರು ಅಮಾಯಕ ಮಕ್ಕಳು ಮೃತಪಟ್ಟಿದ್ದು, ಮೂವರು ಬಾಲಕಿಯರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ.

ಈ ದಾಳಿಯ ಬೆನ್ನಲ್ಲೇ ಪಾಕಿಸ್ತಾನದಲ್ಲಿರುವ ಇರಾನ್ ರಾಯಭಾರಿಯನ್ನು ಇಸ್ಲಾಮಾಬಾದ್ ಗೆ ಕರೆಸಿಕೊಂಡಿರುವ ಸರ್ಕಾರ, ತನ್ನ ದೇಶದ ವಾಯು ಪ್ರದೇಶದ ಮೇಲಿನ ಅಪ್ರಚೋದಿತ ಉಲ್ಲಂಘನೆಯನ್ನು ಬಲವಾಗಿ ಖಂಡಿಸಿದೆ. ಪಾಕಿಸ್ತಾನದ ಸಾರ್ವಭೌಮತ್ವದ ಉಲ್ಲಂಘನೆಯ ಈ ಪ್ರಕರಣ ಸ್ವೀಕಾರಾರ್ಹವಲ್ಲ ಮತ್ತು ಇದು ಗಂಭೀರ ಪರಿಣಾಮಗಳನ್ನು ಬೀರಲಿದೆ ಎಂದು ಎಚ್ಚರಿಕೆ ನೀಡಿದೆ.

"ಪಾಕಿಸ್ತಾನ ಹಾಗೂ ಇರಾನ್ ನಡುವೆ ಸಂವಹನದ ಹಲವು ಮಾರ್ಗಗಳು ಇದ್ದರೂ, ಈ ಅಕ್ರಮ ಕೃತ್ಯವು ನಡೆದಿದೆ ಎನ್ನುವುದು ಹೆಚ್ಚು ಕಳವಳಕಾರಿ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಣ್ಣಿಸಿದೆ.

"ಭಯೋತ್ಪಾದಕತೆ ಈ ಭಾಗದ ಎಲ್ಲ ದೇಶಗಳಿಗೆ ಸಮಾನ ಅಪಾಯ ಎನ್ನುವುದನ್ನು ಪಾಕಿಸ್ತಾನ ಪ್ರತಿಪಾದಿಸುತ್ತಲೇ ಬಂದಿದೆ ಹಾಗೂ ಇದರ ತಡೆಗೆ ಪರಸ್ಪರ ಸಮನ್ವಯದ ಕ್ರಮ ಅಗತ್ಯವಾಗಿದೆ. ಇಂಥ ಏಕಪಕ್ಷೀಯ ಕೃತ್ಯಗಳು ನೆರೆಹೊರೆಯ ದೇಶಗಳ ನಡುವಿನ ಉತ್ತಮ ಬಾಂಧವ್ಯಕ್ಕೆ ಪೂರಕವಲ್ಲ ಹಾಗೂ ದ್ವಿಪಕ್ಷೀಯ ವಿಶ್ವಾಸಕ್ಕೆ ಗಂಭೀರವಾಗಿ ಧಕ್ಕೆ ತರುವಂಥದ್ದು ಎಂದು ಖಂಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News