×
Ad

ಇಸ್ರೇಲಿ ಗೂಢಚರ ಕಾರ್ಯಾಚರಣೆಯೊಂದಿಗೆ ನಂಟು ಆರೋಪ: ನಾಲ್ಕು ಮಂದಿಗೆ ಮರಣದಂಡನೆ ವಿಧಿಸಿದ ಇರಾನ್‌

Update: 2024-01-29 14:58 IST

Photo credit: moneycontrol.com

ಹೊಸದಿಲ್ಲಿ: ಇಸ್ರೇಲಿ ಗೂಢಚರ ಕಾರ್ಯಾಚರಣೆಯೊಂದಿಗೆ ನಂಟು ಹೊಂದಿದ್ದಾರೆಂಬ ಆರೋಪದ ಮೇಲೆ ಇರಾನ್‌ ನಾಲ್ಕು ಜನರಿಗೆ ಸೋಮವಾರ ಮರಣದಂಡನೆ ವಿಧಿಸಿದೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಇರಾನ್‌ನ ಸುಪ್ರೀಂ ಕೋರ್ಟ್‌ಗೆ ಈ ನಾಲ್ಕು ಮಂದಿ ಸಲ್ಲಿಸಿದ ಅಪೀಲು ತಿರಸ್ಕೃತಗೊಂಡ ನಂತರ ಅವರನ್ನು ಗಲ್ಲಿಗೇರಿಸಲಾಗಿದೆ.

ಇರಾಕ್‌ನ ಕುರ್ಡಿಸ್ತಾನ್‌ ಪ್ರದೇಶದಿಂದ ಇರಾಕ್‌ಗೆ ಅಕ್ರಮವಾಗಿ ಪ್ರವೇಶಿಸಿ ಇರಾನ್‌ನ ರಕ್ಷಣಾ ಸಚಿವಾಲಯಕ್ಕೆ ರಕ್ಷಣಾ ಉತ್ಪನ್ನಗಳನ್ನು ತಯಾರಿಸುವ ಇಸ್ಫಾಹಾನ್‌ನಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಬಾಂಬ್‌ ಸ್ಫೋಟ ನಡೆಸುವ ಉದ್ದೇಶವನ್ನು ಅವರು ಹೊಂದಿದ್ದರೆಂದು ಆರೋಪಿಸಲಾಗಿದೆ.

2022ರಲ್ಲಿ ನಡೆಯಬೇಕಿದ್ದ ಈ ಕಾರ್ಯಾಚರಣೆಯನ್ನು ಇರಾನಿನ ಗುಪ್ತಚರ ಇಲಾಖೆ ವಿಫಲಗೊಳಿಸಿತ್ತು. ಇಸ್ರೇಲ್‌ನ ಮೊಸ್ಸಾದ್‌ ಈ ಕಾರ್ಯಚಾರಣೆಯ ಸಂಚು ಹೂಡಿತ್ತೆಂದು ಆರೋಪಿಸಲಾಗಿದೆ.

ಇರಾನ್‌ ಮತ್ತು ಇಸ್ರೇಲ್‌ ಬಹಳ ಸಮಯದಿಂದ ವ್ಯಾಜ್ಯದಲ್ಲಿದ್ದು ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮ ಈಗ ಎರಡೂ ದೇಶಗಳ ನಡುವೆ ವಿವಾದಕ್ಕೆ ಕಾರಣವಾಗಿದೆ. ತನ್ನ ವಿರುದ್ಧದ ಉಗ್ರ ದಾಳಿಗಳನ್ನು ಇರಾನ್‌ ಬೆಂಬಲಿಸುತ್ತಿದೆ ಎಂದು ಇಸ್ರೇಲ್‌ ಆರೋಪಿಸಿದರೆ, ತನ್ನ ಅಧಿಕಾರಿಗಳು ಮತ್ತು ವಿಜ್ಞಾನಿಗಳನ್ನು ಇಸ್ರೇಲ್‌ ಹತ್ಯೆಗೈದಿದೆ ಎಂದು ಇರಾನ್‌ ಹೇಳಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News