×
Ad

ಐಎಇಎ ಜೊತೆಗಿನ ಪರಮಾಣು ಸಹಕಾರ ಕೊನೆಗೊಳಿಸುವ ಕಾನೂನಿಗೆ ಇರಾನಿನ ಗಾರ್ಡಿಯನ್ ಕೌನ್ಸಿಲ್ ಅನುಮೋದನೆ

Update: 2025-06-27 23:46 IST

PHOTO | REUTERS

ಟೆಹ್ರಾನ್: ವಿಶ್ವಸಂಸ್ಥೆಯ ಪರಮಾಣು ನಿಗಾ ಸಂಸ್ಥೆಯಾದ ಅಂತರಾಷ್ಟ್ರೀಯ ಪರಮಾಣು ಇಂಧನ ಏಜೆನ್ಸಿ (ಐಎಇಎ)ಯ ಜೊತೆಗಿನ ಸಹಕಾರವನ್ನು ಸ್ಥಗಿತಗೊಳಿಸುವ ಶಾಸನವನ್ನು ಇರಾನಿನ ಪ್ರಭಾವೀ ಗಾರ್ಡಿಯನ್ ಕೌನ್ಸಿಲ್ ಅನುಮೋದಿಸಿದೆ.

` ಅಂತಿಮ ಅನುಮೋದನೆಗಾಗಿ ಅಧ್ಯಕ್ಷ ಮಸೂದ್ ಪೆಝೆಷ್ಕಿಯಾನ್‍ ಗೆ ಸಲ್ಲಿಸಲಾಗುವ ಪ್ರಸ್ತಾವನೆಯು `ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನಿನ ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಸಂಪೂರ್ಣ ಗೌರವವನ್ನು, ವಿಶೇಷವಾಗಿ ಯುರೇನಿಯಂ ಸಮೃದ್ಧಿಗೆ ಸಂಬಂಧಿಸಿದಂತೆ, ಖಚಿತಪಡಿಸುತ್ತದೆ' ಎಂದು ಅಧ್ಯಕ್ಷರ ವಕ್ತಾರರು ಹೇಳಿದ್ದಾರೆ.

ಇರಾನ್ ತನ್ನ ಪರಮಾಣು ಕಟ್ಟುಪಾಡುಗಳಿಗೆ ಅನುಗುಣವಾಗಿಲ್ಲ ಎಂದು ಆರೋಪಿಸಿ ಐಎಇಎ ಎರಡು ವಾರಗಳ ಹಿಂದೆ ನಿರ್ಣಯವನ್ನು ಅಂಗೀಕರಿಸಿತ್ತು. ಐಎಇಎಯೊಂದಿಗಿನ ಸಹಕಾರವನ್ನು ಅಮಾನತುಗೊಳಿಸುವುದರಿಂದ ವಿಶ್ವಸಂಸ್ಥೆಯ ಪರಿವೀಕ್ಷಕರಿಗೆ ಇರಾನಿನ ಮೂರು ಯುರೇನಿಯಂ ಪುಷ್ಟೀಕರಣ ಕಾರ್ಯಾಚರಣೆಗಳಿಗೆ ಪ್ರವೇಶವನ್ನು ನಿರಾಕರಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News