ಗಾಝಾದಲ್ಲಿ ಕದನ ವಿರಾಮ ಆರಂಭದ ಬಳಿಕ ಇಸ್ರೇಲ್‍ನಿಂದ 97 ನಾಗರಿಕರ ಹತ್ಯೆ : ವರದಿ
Update: 2025-10-20 20:24 IST
Photo Credit : aljazeera.com
ಗಾಝಾ, ಅ.20: ಗಾಝಾದಲ್ಲಿ ಕದನ ವಿರಾಮ ಪ್ರಾರಂಭವಾದಾಗಿನಿಂದ ಇಸ್ರೇಲ್ ಕನಿಷ್ಠ 97 ಫೆಲೆಸ್ತೀನೀಯರನ್ನು ಹತ್ಯೆ ಮಾಡಿದ್ದು 230 ಮಂದಿಯನ್ನು ಗಾಯಗೊಳಿಸಿದೆ ಮತ್ತು 80 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಗಾಝಾದ ಅಧಿಕಾರಿಗಳನ್ನು ಉಲ್ಲೇಖಿಸಿ `ವಫಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಕದನ ವಿರಾಮ ಜಾರಿಗೆ ಬಂದ ಬಳಿಕ ಇಸ್ರೇಲ್ ಸರಣಿ ವೈಮಾನಿಕ ದಾಳಿ ನಡೆಸಿದೆ. ಇಸ್ರೇಲ್ ವಸಾಹತುಗಾರರು ತುಬಾಸ್ ನಗರದ ಉತ್ತರದಲ್ಲಿರುವ ಖಿರ್ಬೆಟ್ ಇಬ್ಜಿಕ್‍ನಲ್ಲಿರುವ ಶಾಲೆಯೊಂದಕ್ಕೆ ನುಗ್ಗಿದ್ದು ಅವರಿಗೆ ಇಸ್ರೇಲ್ ಯೋಧರು ಭದ್ರತೆ ಒದಗಿಸಿದ್ದಾರೆ. ಇಸ್ರೇಲ್ ಯೋಧರು ಮಧ್ಯ ಗಾಝಾದ ಡೀರ್ ಎಲ್-ಬಲಾಹ್‍ನ ಪೂರ್ವದ ಪ್ರದೇಶಗಳಲ್ಲಿ ಫಿರಂಗಿ ಗುಂಡುಗಳನ್ನು ಹಾರಿಸಿದ್ದಾರೆ ಎಂದು ವರದಿ ಹೇಳಿದೆ.