ಕದನ ವಿರಾಮ ಉಲ್ಲಂಘಿಸಿ ಗಾಝಾ ಮೇಲೆ ದಾಳಿ ಮುಂದುವರಿಸಿದ ಇಸ್ರೇಲ್
Update: 2025-10-30 20:20 IST
ಸಾಂದರ್ಭಿಕ ಚಿತ್ರ | Photo : aljazeera.com
ಗಾಝಾ, ಅ.30: ಗಾಝಾದಲ್ಲಿ ಕದನ ವಿರಾಮದ ಉಲ್ಲಂಘನೆಯನ್ನು ಇಸ್ರೇಲ್ ಮುಂದುವರಿಸಿದ್ದು ಗುರುವಾರ ಪೂರ್ವ ಭಾಗಗಳ ಮೇಲೆ ಯುದ್ಧ ವಿಮಾನಗಳು ಹಾಗೂ ಟ್ಯಾಂಕ್‍ಗಳ ಮೂಲಕ ದಾಳಿ ನಡೆಸಿವೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ದಕ್ಷಿಣ ಗಾಝಾ ಪಟ್ಟಿಯ ಖಾನ್ ಯೂನಿಸ್‍ನ ಪೂರ್ವದ ಪ್ರದೇಶಗಳ ಮೇಲೆ ಇಸ್ರೇಲ್ ಯುದ್ಧವಿಮಾನಗಳು 10 ವೈಮಾನಿಕ ದಾಳಿ ನಡೆಸಿವೆ. ಗಾಝಾ ನಗರದ ಮೇಲೆ ಟ್ಯಾಂಕ್‍ಗಳು ಶೆಲ್‍ದಾಳಿ ನಡೆಸಿವೆ. ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪ್ರದೇಶದಲ್ಲಿ ಪಡೆಗಳಿಗೆ ಬೆದರಿಕೆ ಒಡ್ಡಿದ ಮೂಲಸೌಕರ್ಯಗಳ ವಿರುದ್ಧ ನಿಖರ ದಾಳಿ ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ.