×
Ad

ಗಾಝಾ ಪಟ್ಟಿಯಿಂದ ರಾಕೆಟ್‌ ದಾಳಿ: ಯುದ್ಧ ಪರಿಸ್ಥಿತಿ ಘೋಷಿಸಿದ ಇಸ್ರೇಲ್‌; ವರದಿ

Update: 2023-10-07 11:14 IST

Photo credit: X/NDTV

ಜೆರುಸಲೇಂ: ಗಾಝಾ ಪಟ್ಟಿಯ ಕಡೆಯಿಂದ ಇಸ್ರೇಲ್‌ ಪ್ರದೇಶಕ್ಕೆ ಡಜನ್‌ಗಟ್ಟಲೆ ರಾಕೆಟ್‌ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಬೆಳಗ್ಗೆಯಿಂದಲೇ ದಾಳಿ ಆರಂಭವಾಗಿದ್ದು, ಗಾಝಾ ಪಟ್ಟಿಯ ಹಲವಾರು ಕಡೆಗಳಿಂದ ರಾಕೆಟ್‌ ಉಡಾಯಿಸಲಾಗಿದೆ ಎಂದು ವರದಿ ಹೇಳಿದೆ.

ಘಟನೆಯ ಬಗ್ಗೆ ಇದುವರೆಗೂ ಯಾವ ಸಂಘಟನೆಗಳೂ ಹೊಣೆಯನ್ನು ಹೊತ್ತು ಕೊಂಡಿಲ್ಲ.

ರಾಕೆಟ್‌ ದಾಳಿಯ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿರುವ ಇಸ್ರೇಲ್‌ ಸೇನೆ, ಬಾಂಬ್‌ ಶೆಲ್ಟರ್‌ಗಳಿಗೆ ತೆರಳುವಂತೆ ತನ್ನ ನಾಗರಿಕರಿಗೆ ಕರೆ ನೀಡಿದೆ.

ಹಿಂಸಾಚಾರದ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭದ್ರತಾ ಮುಖ್ಯಸ್ಥರನ್ನು ಕರೆದು ಸಭೆ ನಡೆಸಿದ್ದು, ಯುದ್ಧ ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ndtv.com ವರದಿ ಮಾಡಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News