×
Ad

ಇಸ್ರೇಲ್: ಅರಬ್ ಕುಟುಂಬದ ಐವರ ಗುಂಡಿಕ್ಕಿ ಹತ್ಯೆ

Update: 2023-09-28 23:37 IST

ಸಾಂದರ್ಭಿಕ ಚಿತ್ರ Photo: Canva

ಜೆರುಸಲೇಂ: ಇಸ್ರೇಲ್‍ನಲ್ಲಿ ಅರಬ್ ಕುಟುಂಬದ ಐದು ಮಂದಿಯನ್ನು ಅವರ ಮನೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇಸ್ರೇಲ್‍ನ ಉತ್ತರದ ಬಾಸ್ಮತ್ ತಬೂನ್ ನಗರದಲ್ಲಿ ಬುಧವಾರ ಮಹಿಳೆ ಸೇರಿದಂತೆ ಐದು ಮಂದಿಯನ್ನು ಅವರ ಮನೆಯಲ್ಲೇ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಇದಕ್ಕೂ ಮುನ್ನ ನಡೆದ ಪ್ರತ್ಯೇಕ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬರು ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. ಜನವರಿಯಿಂದ ಇಸ್ರೇಲ್‍ನಲ್ಲಿ 180ಕ್ಕೂ ಅಧಿಕ ಅರಬ್ ನಾಗರಿಕರು ಅಪರಾಧ ಸಂಬಂಧಿತ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News