×
Ad

ಕದನ ವಿರಾಮಕ್ಕೆ ಒಪ್ಪಿಕೊಂಡ ಇಸ್ರೇಲ್, ಇರಾನ್

Update: 2025-06-24 12:21 IST

Photo credit: PTI

ಟೆಹರಾನ್ : ಟ್ರಂಪ್ ಅವರ ಕದನ ವಿರಾಮ ಪ್ರಸ್ತಾವನೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಗೆ ನೀಡಿದ್ದಾರೆ. ಇರಾನ್ ಟಿವಿ ಕೂಡ ಕದನ ವಿರಾಮ ಆರಂಭವಾಗಿದೆ ಎಂದು ವರದಿ ಮಾಡಿದೆ.

ಸೋಮವಾರ ರಾತ್ರಿ ಖತರ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಯ ಮೇಲೆ ಇರಾನ್ ಪ್ರತೀಕಾರದ ಕ್ಷಿಪಣಿ ದಾಳಿಯನ್ನು ನಡೆಸಿತ್ತು.

ಮಧ್ಯಪ್ರಾಚ್ಯದಲ್ಲಿನ 12 ದಿನಗಳ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ಮತ್ತು ಇರಾನ್ ಮಂಗಳವಾರ ಒಪ್ಪಿಕೊಂಡಿವೆ ಎಂದು PTI ವರದಿ ಮಾಡಿದೆ.

ಮಂಗಳವಾರ ಮುಂಜಾನೆ ಇಸ್ರೇಲ್‌ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದರು. ಇಸ್ರೇಲ್ ಕೂಡ ಬೆಳಗಿನ ಜಾವ ಇರಾನ್‌ನಾದ್ಯಂತ ವೈಮಾನಿಕ ದಾಳಿಯನ್ನು ನಡೆಸಿದೆ. ಆ ಬಳಿಕ ಎರಡೂ ಕಡೆಯವರು ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಂಡರು ಎಂದು ವರದಿಯಾಗಿದೆ.

ಟ್ರಂಪ್ ಅವರ ಸಮನ್ವಯದೊಂದಿಗೆ ಇಸ್ರೇಲ್ ಇರಾನ್‌ನೊಂದಿಗೆ ದ್ವಿಪಕ್ಷೀಯ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ. ಕದನ ವಿರಾಮದ ಯಾವುದೇ ಉಲ್ಲಂಘನೆಗೆ ಇಸ್ರೇಲ್ ಬಲವಂತವಾಗಿ ಪ್ರತಿಕ್ರಿಯಿಸಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News