×
Ad

ಇರಾನ್ ಜೊತೆಗಿನ ಯುದ್ಧದ ನಡುವೆ ಗಾಝಾದಲ್ಲಿ ಇಸ್ರೇಲ್ ನಿಂದ ಕನಿಷ್ಠ 870 ಮಂದಿಯ ಹತ್ಯೆ!

Update: 2025-06-24 22:47 IST

Photo: Reuters

ಪಶ್ಚಿಮದಂಡೆ: ಇಸ್ರೇಲ್ ಮತ್ತು ಇರಾನ್ ನಡುವಿನ ಪರಸ್ಪರ ದಾಳಿಯ ಮೇಲೆ ವಿಶ್ವದ ಗಮನ ಕೇಂದ್ರೀಕರಿಸುತ್ತಿದ್ದಂತೆ, 12 ದಿನಗಳ ಸಂಘರ್ಷದ ಸಮಯದಲ್ಲಿ ಗಾಝಾದಲ್ಲಿ ಇಸ್ರೇಲಿ ದೌರ್ಜನ್ಯ ನಿರಂತರವಾಗಿ ಮುಂದುವರಿಯಿತು.

ಫೆಲೆಸ್ತೀನ್ ನ ಆರೋಗ್ಯ ಅಧಿಕಾರಿಗಳ ಪ್ರಕಾರ, ಇರಾನ್ ಜೊತೆಗಿನ ಇಸ್ರೇಲ್ ಸಂಘರ್ಷದ ಸಮಯದಲ್ಲಿ ಇಸ್ರೇಲ್ ಪಡೆಗಳ ದಾಳಿಗೆ ಕನಿಷ್ಠ 870 ಜನರು ಮೃತಪಟ್ಟಿದ್ದಾರೆ ಎಂದು Aljazeera ವರದಿ ಮಾಡಿದೆ.

ಇಸ್ರೇಲ್ ದಾಳಿಯಿಂದ ಇದುವರೆಗೂ ಫೆಲೆಸ್ತೀನ್ ನಲ್ಲಿ ಮೃತಪಟ್ಟಿರುವ ಜನರ ಸಂಖ್ಯೆ 56,077 ರಷ್ಟಿದೆ ಎಂದು ತಿಳಿದುಬಂದಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿ ಮೃತಪಟ್ಟಿರುವ ಸಾವಿರಾರು ಜನರ ಸಂಖ್ಯೆ ಇದರಲ್ಲಿ ಸೇರಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News