ಮೇ ಅಂತ್ಯದಿಂದ ಗಾಝಾದ ನೆರವು ಕೇಂದ್ರಗಳಲ್ಲಿ ಕನಿಷ್ಠ 1,760 ಜನರನ್ನು ಇಸ್ರೇಲ್ ಹತ್ಯೆ ಮಾಡಿದೆ : ವಿಶ್ವಸಂಸ್ಥೆ
ಹಸಿವಿನಿಂದ ಮೃತಪಟ್ಟವರ ಸಂಖ್ಯೆ 240ಕ್ಕೆ ಏರಿಕೆ
Update: 2025-08-16 11:30 IST
Photo |AFP
ಹೊಸದಿಲ್ಲಿ : ಮೇ ಅಂತ್ಯದಿಂದ ಗಾಝಾದ ನೆರವು ವಿತರಣಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 1,760 ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ.
ಶುಕ್ರವಾರ ಗಾಝಾ ಪಟ್ಟಿಯಾದ್ಯಂತ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಕನಿಷ್ಠ 44 ಜನರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿರುವ ಬಗ್ಗೆ ಅಲ್ ಜಝೀರಾ ವರದಿ ಮಾಡಿದೆ.
ಶುಕ್ರವಾರ ಗಾಝಾದಲ್ಲಿ ಕನಿಷ್ಠ ಒಂದು ಮಗು ಹಸಿವಿನಿಂದ ಮೃತಪಟ್ಟಿದ್ದು, ಗಾಝಾದಲ್ಲಿ ಈವರೆಗೆ 107 ಮಕ್ಕಳು ಸೇರಿದಂತೆ ಒಟ್ಟು 240 ಮಂದಿ ಹಸಿವಿನಿಂದ ಮೃತಪಟ್ಟಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಗಾಝಾದ ಮೇಲಿನ ಇಸ್ರೇಲ್ ಯುದ್ಧದಲ್ಲಿ ಕನಿಷ್ಠ 61,827 ಜನರು ಮೃತಪಟ್ಟಿದ್ದಾರೆ ಮತ್ತು 1,55,275 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.