ಲೆಬನಾನ್ ಮೇಲೆ ಇಸ್ರೇಲ್ ಡ್ರೋನ್ ದಾಳಿ: ಮೂವರು ನಾಗರಿಕರು ಮೃತ್ಯು
Update: 2025-06-24 13:47 IST
Screengrab: X/@LebanonOnNews
ಲೆಬನಾನ್ : ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ಮಿಲಿಟರಿ ನಡೆಸಿದ ಡ್ರೋನ್ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ ಎಂದು Aljazeera ವರದಿ ಮಾಡಿದೆ.
ಇಸ್ರೇಲ್ ಡ್ರೋನ್‌ಗಳು ವಾಹನವೊಂದರ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.
ಲೆಬನಾನ್ ಮಾಧ್ಯಮ ಬಿಡುಗಡೆ ಮಾಡಿದ ವೀಡಿಯೊದಲ್ಲಿ ದಕ್ಷಿಣ ಭಾಗದಲ್ಲಿರುವ ಕಾಫ್ರದಾಜಲ್ ರಸ್ತೆಯಲ್ಲಿ ಕಾರೊಂದು ಬೆಂಕಿಗೆ ಆಹುತಿಯಾಗುತ್ತಿರುವುದು ಕಂಡು ಬಂದಿದೆ. ಈ ವೀಡಿಯೋವನ್ನು Aljazeera ಸನದ್ ಏಜೆನ್ಸಿ ಪರಿಶೀಲಿಸಿ ದೃಢಪಡಿಸಿದೆ.
مسيرة إسرائيلية معادية تستهدف سيارة في منطقة كفردجال قضاء #النبطية pic.twitter.com/ABdRi0k38Q
— LebanonOn (@LebanonOnNews) June 24, 2025