×
Ad

ಯೆಮೆನ್‌ ಮೇಲೆ ಇಸ್ರೇಲ್‌ನಿಂದ ವಾಯು ದಾಳಿ; ಕನಿಷ್ಠ 35 ಮಂದಿ ಮೃತ್ಯು

Update: 2025-09-11 10:49 IST

Photo | AP

ಸನಾ : ಯೆಮೆನ್‌ನ ರಾಜಧಾನಿ ಸನಾ ಮತ್ತು ಅಲ್-ಜಾವ್ಫ್ ಗವರ್ನರೇಟ್‌ ನಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 35 ಮಂದಿ ಮೃತಪಟ್ಟಿರುವ ಬಗ್ಗೆ Aljazeera ವರದಿ ಮಾಡಿದೆ.

ಖತರ್‌ನ ರಾಜಧಾನಿ ದೋಹಾದಲ್ಲಿ ಹಮಾಸ್ ನಾಯಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ನಡೆಸಿದ ದಾಳಿಯ ಒಂದು ದಿನದ ನಂತರ ಈ ದಾಳಿ ನಡೆದಿದೆ.

ಯೆಮೆನ್ ಆರೋಗ್ಯ ಸಚಿವಾಲಯದ ಪ್ರಾಥಮಿಕ ಅಂಕಿಅಂಶಗಳ ಪ್ರಕಾರ, ಸನಾ ಮತ್ತು ಅಲ್-ಜಾವ್ಫ್ ಮೇಲಿನ ದಾಳಿಗಳಲ್ಲಿ 131 ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ಇನ್ನೂ ಮುಂದುವರಿಯುತ್ತಿರುವುದರಿಂದ ಸಾವಿನ ಮತ್ತು ಗಾಯಾಳುಗಳ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಸಚಿವಾಲಯ ಎಚ್ಚರಿಸಿದೆ.

ಸನಾದ ಅಲ್-ತಹ್ರಿರ್ ಪ್ರದೇಶದ ಮನೆಗಳು, ನಗರದ ನೈಋತ್ಯ ಭಾಗದಲ್ಲಿರುವ 60ನೇ ಬೀದಿಯ ವೈದ್ಯಕೀಯ ಕೇಂದ್ರ, ಹಾಗೆಯೇ ಅಲ್-ಜಾವ್ಫ್‌ ನ ರಾಜಧಾನಿ ಅಲ್-ಹಜ್ಮ್‌ ನ ಸರಕಾರಿ ಸಂಕೀರ್ಣ ಸೇರಿದಂತೆ ನಾಗರಿಕ ಮತ್ತು ವಸತಿ ಪ್ರದೇಶಗಳು ದಾಳಿಗೆ ಗುರಿಯಾಗಿವೆ ಎಂದು ವರದಿಯಾಗಿದೆ.

ಬಾಂಬ್ ದಾಳಿಯಿಂದ ಉಂಟಾದ ಬೆಂಕಿಯನ್ನು ನಂದಿಸಲು ಹಾಗೂ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ನಾಗರಿಕ ರಕ್ಷಣಾ ಸಿಬ್ಬಂದಿ ತುರ್ತು ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News