×
Ad

ಗಾಝಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ವಾಯು ದಾಳಿ: ಕನಿಷ್ಠ 68 ಮಂದಿ ಸಾವು

Update: 2023-12-25 18:01 IST

ಸಾಂದರ್ಭಿಕ ಚಿತ್ರ | Photo: PTI 

ಗಾಝಾ: ಕೇಂದ್ರ ಗಾಝಾದ ಮಘಝಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ನಡೆಸಿದ ವಾಯು ದಾಳಿಯಲ್ಲಿ ಕನಿಷ್ಠ 68 ಜನರು ಮೃತಪಟ್ಟಿದ್ದಾರೆಂದು ಗಾಝಾದ ಆರೋಗ್ಯ ಸಚಿವಾಲಯ ಹೇಳಿದೆ.

ಡೇರ್‌ ಅಲ್-ಬಲಾಹ್‌ ಎಂಬಲ್ಲಿನ ಈ ಶಿಬಿರದ ಮೇಲಿನ ದಾಳಿಯಲ್ಲಿ ಮೃತಪಟ್ಟವರಲ್ಲಿ 12 ಮಂದಿ ಮಹಿಳೆಯರು ಮತ್ತು ಏಳು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ಈ ಶಿಬಿರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕುಟುಂಬಗಳು ವಾಸಿಸುತ್ತಿದ್ದುದರಿಂದ ಮೃತರ ಸಂಖ್ಯೆ ಹೆಚ್ಚಾಗುವ ಭೀತಿಯಿದೆ.

ಇನ್ನೊಂದು ಹಂತದ ಕದನ ವಿರಾಮ ಮತ್ತು ಒತ್ತೆಯಾಳುಗಳ ವಿನಿಮಯಕ್ಕಾಗಿ ಈಜಿಪ್ಟ್‌ ಶ್ರಮಿಸುತ್ತಿರುವಂತೆಯೇ ಕ್ರಿಸ್ಮಸ್‌ ಮುನ್ನಾದಿನ ಈ ವಾಯು ದಾಳಿ ನಡೆದಿದೆ.

ಗಾಝಾ ಮೇಲಿನ ಇಸ್ರೇಲ್‌ ದಾಳಿಯಲ್ಲಿ ಇಲ್ಲಿಯ ತನಕ 8000 ಮಕ್ಕಳು ಸೇರಿದಂತೆ 20,000ಕ್ಕೂ ಅಧಿಕ ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ.

ವೆಸ್ಟ್‌ ಬ್ಯಾಂಕಿನ ಫೆಲೆಸ್ತೀನಿ ಭೂಭಾಗವಾಗಿರುವ ಏಸು ಕ್ರಿಸ್ತನ ಜನ್ಮಸ್ಥಳವಾದ ಬೆಥ್ಲಹೆಮ್‌ನಲ್ಲಿ ಕ್ರಿಸ್ಮಸ್‌ ಆಚರಣೆಯಲ್ಲಿ ಎಂದಿನ ಸಂಭ್ರಮವಿಲ್ಲದಂತಾಗಿದ್ದು ರಜೆಗಳನ್ನೂ ರದ್ದುಗೊಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News