×
Ad

ಗಾಝಾ: ಇಸ್ರೇಲ್ ಕಾರ್ಯಾಚರಣೆಯಲ್ಲಿ 32 ಮಂದಿ ಮೃತ್ಯು; 10 ಮಂದಿಗೆ ಗಾಯ

Update: 2025-07-05 21:47 IST

PC : aljazeera.com

ಗಾಝಾ ನಗರ: ಯುದ್ಧದಿಂದ ಜರ್ಝರಿತಗೊಂಡಿರುವ ಗಾಝಾ ಪಟ್ಟಿಯಲ್ಲಿ ಶನಿವಾರ ಇಸ್ರೇಲ್ ಮಿಲಿಟರಿಯ ಕಾರ್ಯಾಚರಣೆಯಲ್ಲಿ 32 ಮಂದಿ ಸಾವನ್ನಪ್ಪಿರುವುದಾಗಿ ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿ ಹೇಳಿದೆ.

ಸ್ಥಳಾಂತರಗೊಂಡಿರುವವರು ಆಶ್ರಯ ಪಡೆದಿದ್ದ ಗಾಝಾ ನಗರದಲ್ಲಿನ ಶಾಲೆಯೊಂದರ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ. ಗಾಝಾ ನಗರದ ಮತ್ತೊಂದು ಶಾಲೆಯ ಬಳಿ ನಡೆದ ವೈಮಾನಿಕ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು ಇತರ 10 ಮಂದಿ ಗಾಯಗೊಂಡಿದ್ದಾರೆ.

ದಕ್ಷಿಣ ಗಾಝಾದ ನೆರವು ವಿತರಣಾ ಕೇಂದ್ರದ ಬಳಿ ನಡೆದ ಗುಂಡಿನ ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿದ್ದು ಇತರ ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ 16 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. 2023ರ ಅಕ್ಟೋಬರ್ ನಲ್ಲಿ ಯುದ್ಧ ಆರಂಭಗೊಂಡಂದಿನಿಂದ ಗಾಝಾದ ಹಲವು ನಿವಾಸಿಗಳು ಶಾಲೆಗಳು ಹಾಗೂ ಇತರ ಸಾರ್ವಜನಿಕ ಕಟ್ಟಡಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ಮಧ್ಯೆ, ಗಾಝಾ ಯುದ್ಧ ವಿರಾಮಕ್ಕೆ ಅಮೆರಿಕ ಬೆಂಬಲಿತ ಪ್ರಸ್ತಾವನೆಯ ಬಗ್ಗೆ ತಕ್ಷಣವೇ ಮಾತುಕತೆ ಆರಂಭಿಸಲು ತಾನು ಸಿದ್ಧ ಎಂದು ಹಮಾಸ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News