ಗಾಝಾ ಪಟ್ಟಿಯ ಸುತ್ತಲಿನ ಪ್ರದೇಶದಲ್ಲಿ 1500 ಹಮಾಸ್ ಹೋರಾಟಗಾರರ ಮೃತದೇಹಗಳು ಪತ್ತೆ: ಇಸ್ರೇಲ್ ಸೇನೆ
Update: 2023-10-10 13:01 IST
Photo: PTI
ಜೆರುಸಲೆಂ: ಸುಮಾರು 1500 ಹಮಾಸ್ ಹೋರಾಟಗಾರರ ಮೃತದೇಹಗಳು ಇಸ್ರೇಲ್‌ನಲ್ಲಿ ಗಾಝಾ ಪಟ್ಟಿಯ ಸುತ್ತಲಿನ ಪ್ರದೇಶದಲ್ಲಿ ಪತ್ತೆಯಾಗಿವೆ ಎಂದು ಇಸ್ರೇಲ್ ಸೇನೆ ಇಂದು ಹೇಳಿದೆ.
ಈ ಕುರಿತು ಮಾಹಿತಿ ನೀಡಿದ ಇಸ್ರೇಲ್‌ನ ಮಿಲಿಟರಿ ವಕ್ತಾರ ರಿಚರ್ಡ್ ಹೆಚ್ಟ್, ಗಾಝಾ ಜೊತೆಗಿನ ಗಡಿ ಪ್ರದೇಶದಲ್ಲಿ ಇಸ್ರೇಲ್ ಬಹುಪಾಲು ನಿಯಂತ್ರಣ ಮರುಸ್ಥಾಪಿಸಿದೆ ಎಂದು ಹೇಳಿದ್ದಾರೆ.
“ಕಳೆದ ರಾತ್ರಿಯಿಂದ ಯಾರೂ ಒಳಬಂದಿಲ್ಲ, ಆದರೆ ನುಸುಳುವಿಕೆ ನಡೆಯಬಹುದು,” ಎಂದು ಅವರು ಹೇಳಿದರಲ್ಲದೆ ಗಡಿ ಪ್ರದೇಶದ ಸುತ್ತಲಿನ ಎಲ್ಲಾ ಜನರ ತೆರವು ಕಾರ್ಯಾಚರಣೆಯನ್ನು ಸೇನೆ ಬಹುತೇಕ ಪೂರ್ಣಗೊಳಿಸಿದೆ ಎಂದರು.
ಕಳೆದ ಶನಿವಾರ ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಇಸ್ರೇಲ್ ವ್ಯಾಪಕ ವಾಯು ದಾಳಿಯನ್ನು ಗಾಝಾ ಪಟ್ಟಿಯ ಹಮಾಸ್ ನೆಲೆಗಳ ಮೇಲೆ ಮಾಡಿದೆ ಎಂದು ವರದಿಯಾಗಿದೆ.