×
Ad

ಜಪಾನ್ | 130 ವರ್ಷಗಳಲ್ಲಿ ಮೊದಲ ಬಾರಿಗೆ ಹಿಮರಹಿತವಾದ ಫ್ಯೂಜಿ ಪರ್ವತ

Update: 2024-10-31 21:22 IST

Wikimedia Commons/Alpsdake

ಟೋಕಿಯೊ : ಜಪಾನ್‍ ನ ಫ್ಯೂಜಿ ಪರ್ವತ 130 ವರ್ಷಗಳಲ್ಲಿ ಇದೇ ಮೊದಲ ಬಾರಿ ಹಿಮರಹಿತವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

12,388 ಅಡಿ ಎತ್ತರದ ಪ್ಯೂಜಿ ಪರ್ವತ ಜುಲೈಯಿಂದ ಸೆಪ್ಟಂಬರ್ ವರೆಗಿನ ಅವಧಿ ಹೊರತುಪಡಿಸಿ ವರ್ಷವಿಡೀ ಹಿಮದಿಂದ ಆವೃತವಾಗಿರುತ್ತದೆ. ಸೂರ್ಯ ಉದಯಿಸುವ ಅದ್ಭುತ ದೃಶ್ಯವನ್ನು ಪರ್ವತದ ಶಿಖರದಿಂದ ವೀಕ್ಷಿಸಲು ಪರ್ವತಾರೋಹಿಗಳು ಕಾತರರಾಗಿರುತ್ತಾರೆ. ಸಾಮಾನ್ಯವಾಗಿ ಅಕ್ಟೋಬರ್ 2ರಿಂದ ಹಿಮದ ಪದರ ಪರ್ವತವನ್ನು ಆವರಿಸಿಕೊಳ್ಳಲು ಆರಂಭವಾಗುತ್ತದೆ. ಆದರೆ ಈ ಬಾರಿ ಅಕ್ಟೋಬರ್ 28ರವರೆಗೂ ಪರ್ವತದಲ್ಲಿ ಹಿಮಗಡ್ಡೆಗಳು ಕಾಣಿಸಿಕೊಂಡಿಲ್ಲ.

ಹಿಮಪದರ ರೂಪುಗೊಳ್ಳುವಲ್ಲಿ ವಿಳಂಬಕ್ಕೆ ಹವಾಮಾನ ಬದಲಾವಣೆಯು ಪರಿಣಾಮ ಬೀರಿರಬಹುದು. ಈ ಬಾರಿ ಜಪಾನ್‍ ನಲ್ಲಿ ತಾಪಮಾನ ಗರಿಷ್ಠ ಮಟ್ಟದಲ್ಲಿತ್ತು ಮತ್ತು ಸೆಪ್ಟಂಬರ್ ಅಂತ್ಯದವರೆಗೂ ಗರಿಷ್ಠ ಮಟ್ಟದಲ್ಲೇ ಮುಂದುವರಿದಿದೆ. ಇದು ಹಿಮವನ್ನು ಹೊತ್ತು ತರುವ ಶೀತ ಗಾಳಿಯನ್ನು ತಡೆದಿದೆ ಎಂದು ಹವಾಮಾನ ತಜ್ಞ ಯುಟಾಕ ಕತ್ಸುತ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News