×
Ad

ಸೆಪ್ಟೆಂಬರ್ ತಿಂಗಳಲ್ಲಿ ತಮ್ಮ ಹುದ್ದೆ ತ್ಯಜಿಸುವುದಾಗಿ ಪ್ರಕಟಿಸಿದ ಜಪಾನ್ ಪ್ರಧಾನಿ ಫ್ಯುಮಿಯೊ ಕಿಶಿದ

Update: 2024-08-14 11:40 IST

PC: x.com/nytimes

ಟೋಕಿಯೊ : ಮುಂದಿನ ತಿಂಗಳು ನಡೆಯಲಿರುವ ಆಡಳಿತಾರೂಢ ಎಲ್ಡಿಾಪಿ ಪಕ್ಷದ ಆಂತರಿಕ ಚುನಾವಣೆಯಲ್ಲಿ ಮರು ಆಯ್ಕೆ ಬಯಸುವುದಿಲ್ಲ ಎಂದು ಪ್ರಕಟಿಸುವ ಮೂಲಕ ಜಪಾನ್ ಪ್ರಧಾನಿ ಫ್ಯುಮಿಯೊ ಕಿಶಿದ ಪ್ರಧಾನಿ ಹುದ್ದೆ ತೊರೆಯುವ ಸೂಚನೆ ನೀಡಿದ್ದಾರೆ. ಹೀಗಾಗಿ ಜಪಾನ್ ಅಧಿಕಾರದ ಚುಕ್ಕಾಣಿಯನ್ನು ನೂತನ ಪ್ರಧಾನಿ ಹಿಡಿಯುವುದು ನಿಶ್ಚಿತವಾಗಿದೆ.

ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಿಶಿದ, ಎಲ್ ಡಿ ಪಿ ಪಕ್ಷದ ಉಸ್ತುವಾರಿಯನ್ನು ಹೊಸ ಮುಖ ವಹಿಸಿಕೊಳ್ಳುವುದಕ್ಕೆ ಇದು ಸಮಯವಾಗಿದ್ದು, ನಾನು ಅವರ ನಾಯಕತ್ವಕ್ಕೆ ಸಂಪೂರ್ಣ ಬೆಂಬಲ ನೀಡಲಿದ್ದೇನೆ ಎಂದು ಹೇಳಿದ್ದಾರೆ.

“ಈ ಚುನಾವಣೆಯಲ್ಲಿ ಎಲ್ ಡಿ ಪಿ ಬದಲಾಗುತ್ತಿದೆ ಹಾಗೂ ಪಕ್ಷವು ಹೊಸ ಎಲ್ ಡಿ ಪಿ ಯಾಗಿದೆ ಎಂದು ಜನರಿಗೆ ತೋರಿಸುವುದು ಅನಿವಾರ್ಯವಾಗಿದೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೂರು ವರ್ಷದ ಅವಧಿಯ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸೆಪ್ಟೆಂಬರ್ 2021ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಜಯ ಗಳಿಸಿದ್ದ ಕಿಶಿದ, ಇದರ ಬೆನ್ನಿಗೇ ನಡೆದ ಸಾರ್ವತ್ರಿಕ ಚುನಾವಣೆಯಲ್ಲೂ ಜಯಭೇರಿ ಬಾರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News