×
Ad

ಒಂದೇ ವಾರದಲ್ಲಿ 13,532 ಮಂದಿ ಅಕ್ರಮ ವಲಸಿಗರನ್ನು ಬಂಧಿಸಿದ ಸೌದಿ ಅರೇಬಿಯಾ!

Update: 2025-06-28 23:02 IST

Photo: Saudi Press Agency

ರಿಯಾದ್: ವಾಸ್ತವ್ಯ, ಉದ್ಯೋಗ ಹಾಗೂ ಗಡಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸೌದಿ ಅರೇಬಿಯಾ ಪ್ರಾಧಿಕಾರಗಳು ಕೇವಲ ಒಂದೇ ವಾರದಲ್ಲಿ 13,532 ಮಂದಿಯನ್ನು ಬಂಧಿಸಿವೆ ಎಂದು ಶನಿವಾರ ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.

ಈ ಪೈಕಿ, ವಾಸ್ತವ್ಯ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಒಟ್ಟು 7,903 ಮಂದಿಯನ್ನು ಬಂಧಿಸಲಾಗಿದ್ದರೆ, ಅಕ್ರಮವಾಗಿ ಗಡಿ ನುಸುಳುವ ಪ್ರಯತ್ನ ನಡೆಸಿದ ಆರೋಪದ ಮೇಲೆ 3,744 ಮಂದಿಯನ್ನು ಬಂಧಿಸಲಾಗಿದೆ. ಉಳಿದ 1,885 ಮಂದಿಯನ್ನು ಉದ್ಯೋಗ ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಸೌದಿ ಅರೇಬಿಯಾವನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಬಂಧಿತರಾಗಿರುವ 1,892 ಆರೋಪಿಗಳ ಪೈಕಿ, ಶೇ. 67 ಮಂದಿ ಇಥಿಯೋಪಿಯಾ, ಶೇ. 33ರಷ್ಟು ಯೆಮೆನ್ ಹಾಗೂ ಉಳಿದ ಶೇ. 2ರಷ್ಟು ಆರೋಪಿಗಳು ಇತರೆ ದೇಶಗಳ ಪ್ರಜೆಗಳು ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನೆರೆಯ ದೇಶಗಳಿಗೆ ನುಸುಳಲು ಯತ್ನಿಸುತ್ತಿದ್ದ ಇನ್ನೂ 34 ಮಂದಿಯನ್ನು ಸೆರೆ ಹಿಡಿಯಲಾಗಿದ್ದು, ಕಾನೂನು ಉಲ್ಲಂಘಿಸಿದವರಿಗೆ ಸಾರಿಗೆ ಮತ್ತು ಆಶ್ರಯದ ನೆರವು ಒದಗಿಸುತ್ತಿದ್ದ ಆರೋಪದ ಮೇಲೆ 17 ಮಂದಿಯನ್ನು ಬಂಧಿಸಲಾಗಿದೆ ಎಂದೂ ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.

ಒಂದು ವೇಳೆ ಯಾರಾದರೂ ಸಾರಿಗೆ ಮತ್ತು ಆಶ್ರಯ ಸೇರಿದಂತೆ ಸೌದಿ ಅರೇಬಿಯಾವನ್ನು ಅಕ್ರಮವಾಗಿ ಪ್ರವೇಶಿಸಲು ನೆರವು ಒದಗಿಸುತ್ತಿರುವುದು ಕಂಡು ಬಂದರೆ, ಅಂಥವರಿಗೆ ಗರಿಷ್ಠ 15 ವರ್ಷ ಜೈಲು ಶಿಕ್ಷೆ, ಒಂದು ದಶಲಕ್ಷ ಸೌದಿ ರಿಯಾಲ್ (2.28 ಕೋಟಿ ರೂಪಾಯಿ) ದಂಡ ವಿಧಿಸುವುದೂ ಸೇರಿದಂತೆ, ಅಂಥವರ ವಾಹನಗಳು ಹಾಗೂ ಆಸ್ತಿಪಾಸ್ತಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಸೌದಿ ಅರೇಬಿಯಾದ ಆಂತರಿಕ ವ್ಯವಹಾರಗಳ ಸಚಿವಾಲಯ ಎಚ್ಚರಿಕೆ ನೀಡಿದೆ.

ಸೌಜನ್ಯ: arabnews.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News