Photo Credit : AP 

ಬೈರೂತ್: ದಕ್ಷಿಣ ಲೆಬನಾನ್‍ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಲೆಬನಾನ್‍ನ ಆರೋಗ್ಯ ಸಚಿವಾಲಯ ರವಿವಾರ ತಿಳಿಸಿದೆ.

ದಕ್ಷಿಣ ಲೆಬನಾನ್‍ನ ನಬತಿಯಾ ಅಲ್-ಫೌಕಾ ಪ್ರದೇಶದಲ್ಲಿ ಇಬ್ಬರು ಮತ್ತು ಸಮೀಪದ ಅರಬ್ ಸಲೀಂ ಎಂಬಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ನಬತಿಯಾ ನಗರ ಹಾಗೂ ಕಫಾರ್ ರಮ್ಮನ್ ಪಟ್ಟಣಗಳಲ್ಲಿ ನಡೆದ ಪ್ರತ್ಯೇಕ ದಾಳಿಗಳಲ್ಲಿ ಹಲವು ಮಹಿಳೆಯರು ಮತ್ತು ಮೂರು ಮಕ್ಕಳು ಸೇರಿದಂತೆ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನಬತಿಯಾ ಅಲ್-ಫೌಕಾದಲ್ಲಿ ನಡೆದ ದಾಳಿಯಲ್ಲಿ ಘಂಡೂರ್ ಆಸ್ಪತ್ರೆಯ ಒಂದು ಭಾಗ ಧ್ವಂಸಗೊಂಡಿದೆ. ನಬತಿಯಾ ನಗರದ ಮೇಲಿನ ದಾಳಿಯಲ್ಲಿ ಹಣಕಾಸು ಮತ್ತು ಕೃಷಿ ಪ್ರಾಧಿಕಾರಗಳಿಗೆ ಸೇರಿದ ಕಚೇರಿಗಳಿಗೆ, ಸುತ್ತಮುತ್ತಲಿನ ಅಂಗಡಿಗಳು ಮತ್ತು ಕೆಫೆಗಳಿಗೆ ಹಾನಿಯಾಗಿವೆ ಎಂದು ಸಚಿವಾಲಯ ಹೇಳಿದೆ.

ತನ್ನ ಸೈನಿಕರತ್ತ ಹಿಜ್ಬುಲ್ಲಾ ಹೋರಾಟಗಾರರು ಎರಡು ಡ್ರೋನ್‍ಗಳನ್ನು ಉಡಾಯಿಸಿದ ನಂತರ ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor