ಸಾಂದರ್ಭಿಕ ಚಿತ್ರ (AI)

ಟೆಹರಾನ್: ಜೋರ್ಡಾನ್‍ನಲ್ಲಿರುವ ಅಮೆರಿಕ ಮಿಲಿಟರಿ ನೆಲೆಯ ಮೇಲೆ ಇರಾನ್ ಪಡೆಗಳು ಅನಿರೀಕ್ಷಿತ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್‍ನ ಮಾಧ್ಯಮಗಳು ವರದಿ ಮಾಡಿವೆ.

`ದಾಳಿಯನ್ನು ತಡೆಯಲು ಅತ್ಯುತ್ತಮ ಮಾರ್ಗವೆಂದರೆ ಮೊದಲು ದಾಳಿಕೋರರ ಮೇಲೆ ದಾಳಿ ಮಾಡುವುದು. ನಮ್ಮ ಮೇಲೆ ದಾಳಿ ಮಾಡಲು ಸಜ್ಜಾಗುತ್ತಿದ್ದ ಜೋರ್ಡಾನ್‍ನಲ್ಲಿರುವ ಅಮೆರಿಕದ ನೆಲೆಯ ಮೇಲೆ ನಮ್ಮ ಪಡೆಗಳು ದಾಳಿ ನಡೆಸಿವೆ. ಮಧ್ಯಪ್ರಾಚ್ಯದಲ್ಲಿ, ಮುನ್ನೆಚ್ಚರಿಕೆಯ ದಾಳಿಗೂ ಈಗ ಮುನ್ನೆಚ್ಚರಿಕೆಯ ದಾಳಿಯ ಅಗತ್ಯವಿದೆ' ಎಂದು ಮುಂಬೈನಲ್ಲಿರುವ ಇರಾನ್‍ನ ಕಾನ್ಸುಲೇಟ್ ಜನರಲ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. ಆದರೆ ದಾಳಿಯ ವರದಿಗಳನ್ನು ಅಮೆರಿಕದ ಅಧಿಕಾರಿ ತಳ್ಳಿಹಾಕಿದ್ದಾರೆ. ಜೋರ್ಡಾನ್ ಸರಕಾರವೂ ಅಧಿಕೃತವಾಗಿ ದೃಢೀಕರಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor