Image Credit: @CENTCOM/X

ಟೆಹರಾನ್: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ರ್ಸ್ (ಐಆರ್ಜಿಸಿ) ಅಮೆರಿಕ ನೌಕಾಪಡೆಯ ಎರಡು ಯುದ್ಧನೌಕೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ನಂತರ, ಅಮೆರಿಕ ಸೇನೆಯು ಶನಿವಾರ ಇರಾನ್‌ನ ಮೂರು ಕಚ್ಚಾ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿ ಅವುಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ತಿಳಿಸಿದೆ.

ಇರಾನ್‌ನ ಖಾರ್ಗ್ ದ್ವೀಪದ ಕರಾವಳಿಯಲ್ಲಿ ಎಮ್/ಟಿ ಡೌನಿ ಮತ್ತು ಜಸ್ಕ್ ಬಳಿ ಎಮ್/ಟಿ ಸ್ಟಾರ್ಕ್ 1 ನೌಕೆಗಳನ್ನು ಗುರಿಯಾಗಿಸಲಾಗಿತ್ತು. ಈ ಎರಡೂ ನೌಕೆಗಳು ಐಆರ್ಜಿಸಿಯೊಂದಿಗೆ ಸಂಪರ್ಕ ಹೊಂದಿದ್ದ ಕಚ್ಚಾ ತೈಲ ವಾಹಕಗಳಾಗಿದ್ದು, ಅವುಗಳನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಲಾಗಿದೆ. ಮೂರನೇ ನೌಕೆಯಾದ ಎಮ್/ಟಿ ಕೈಲೊ ಒಮಾನ್ ಕೊಲ್ಲಿಯಲ್ಲಿದ್ದ ಖಾಲಿ ಕಚ್ಚಾ ತೈಲ ವಾಹಕವಾಗಿತ್ತು. ಈ ಹಡಗಿನ ಮೇಲೆ ದಾಳಿ ಮಾಡುವ ಮೊದಲು, ಅದರ ಸಿಬ್ಬಂದಿಗೆ ಹಡಗನ್ನು ತೊರೆಯುವಂತೆ ಆದೇಶಿಸಲಾಗಿತ್ತು ಎಂದು ಸೆಂಟ್ರಲ್ ಕಮಾಂಡ್ ಹೇಳಿದೆ. ಇರಾನ್‌ನ ದಾಳಿಗಳಿಂದ ಅಮೆರಿಕನ್ ಪಡೆಗಳು ಯಶಸ್ವಿಯಾಗಿ ತಪ್ಪಿಸಿಕೊಂಡಿದ್ದು ಈ ಘಟನೆಯಲ್ಲಿ ಯಾವುದೇ ಅಮೆರಿಕನ್ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಅಮೆರಿಕದ ಸೇನೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor