ಉತ್ತರ ಅಫ್ಘಾನಿಸ್ತಾನದಲ್ಲಿ ಭೀಕರ ಭೂಕಂಪ : ಕಾಬೂಲ್‍ನಲ್ಲೂ ಕಂಪನ
Update: 2025-11-03 08:17 IST
ಕಾಬೂಲ್: ಉತ್ತರ ಅಫ್ಘಾನಿಸ್ತಾನದಲ್ಲಿ ರವಿವಾರ ಮಧ್ಯರಾತ್ರಿ ತೀವ್ರ ಭೂಕಂಪ ಸಂಭವಿಸಿದೆ ಎಂದು ಯುಎಸ್‍ಜಿಎಸ್ ಪ್ರಕಟಿಸಿದೆ. ಭೂಕಂಪದ ತೀವ್ರತೆ 6.3ರಷ್ಟಿತ್ತು ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೆ ವಿವರಿಸಿದೆ.
ಮಝರ್ ಐ ಷರೀಫ್ ನಗರದ ಸಮೀಪದ ಖೊಲ್ಮ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದು, ಭೂಕಂಪ 28 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ರಾಜಧಾನಿ ಕಾಬೂಲ್‍ನಲ್ಲಿ ಕೂಡಾ ಕಂಪನದ ಅನುಭವವಾಗಿದೆ ಎಂದು ಎಎಫ್‍ಪಿ ವರದಿ ಹೇಳಿದೆ.
ಭೂಕಂಪ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು, ಬಳಿಕ 28 ಕಿಲೋಮೀಟರ್ ಎಂದು ಪರಿಷ್ಕರಿಸಲಾಗಿದೆ. ಎರಡು ತಿಂಗಳ ಹಿಂದೆ 6.0 ತೀವ್ರತೆಯ ಭೂಕಂಪ ಪೂರ್ವ ಅಫ್ಘಾನ್‍ನಲ್ಲಿ ಸಂಭವಿಸಿದ್ದು, ಇದರಲ್ಲಿ 2,200 ಮಂದಿ ಮೃತಪಟ್ಟಿದ್ದರು. ಇದು ದೇಶದ ಇತಿಹಾಸದಲ್ಲೇ ಭಯಾನಕ ಭೂಕಂಪ ಎನಿಸಿಕೊಂಡಿತ್ತು.