×
Ad

ಐಸಿಸಿಯಿಂದ ನಿರ್ಗಮನ : ಮಾಲಿ, ನೈಜರ್, ಬುರ್ಕಿನ ಫಾಸೊ ಘೋಷಣೆ

Update: 2025-09-23 21:35 IST

PC ; icc-cpi.int

ಡಕಾರ್, ಸೆ.23: ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) `ನವ- ವಸಾಹತು ದಬ್ಬಾಳಿಕೆಯ ಸಾಧನ'ವಾಗಿದೆ ಎಂದು ಮಿಲಿಟರಿ ಆಡಳಿತವಿರುವ ಪಶ್ಚಿಮ ಆಫ್ರಿಕಾ ದೇಶಗಳಾದ ಮಾಲಿ, ನೈಜರ್ ಮತ್ತು ಬುರ್ಕಿನಾ ಫಾಸೊ ಖಂಡಿಸಿದ್ದು ಐಸಿಸಿಯಿಂದ ಹೊರ ಬರುವುದಾಗಿ ಘೋಷಿಸಿವೆ.

ಯುದ್ಧ ಅಪರಾಧಗಳು, ಮಾನವೀಯತೆಯ ವಿರುದ್ಧದ ಅಪರಾಧಗಳು, ಆಕ್ರಮಣಶೀಲತೆ ಮತ್ತು ನರಮೇಧದ ಅಪರಾಧಗಳನ್ನು ವಿಚಾರಣೆಗೆ ಒಳಪಡಿಸಲು ಐಸಿಸಿ ವಿಫಲವಾಗಿವೆ ಎಂದು ಹೇಳಿಕೆಯಲ್ಲಿ ಟೀಕಿಸಲಾಗಿದೆ.

ಮೂರು ದೇಶಗಳು ಹೊರಡಿಸಿರುವ ಜಂಟಿ ಹೇಳಿಕೆಯು 2020 ಮತ್ತು 2023ರ ನಡುವೆ 8 ದಂಗೆಗಳ ಬಳಿಕ ಪಶ್ಚಿಮ ಆಫ್ರಿಕಾದ ಸಾಹೆಲ್ ಪ್ರದೇಶದಲ್ಲಿ ರಾಜತಾಂತ್ರಿಕ ವಿಪ್ಲವದ ಇತ್ತೀಚಿನ ಉದಾಹರಣೆಯಾಗಿದೆ. ಈ ಮೂರೂ ದೇಶಗಳು ಈಗಾಗಲೇ ಪಶ್ಚಿಮ ಆಫ್ರಿಕಾದ ಪ್ರಾದೇಶಿಕ ಬಣ `ಇಕೊವಾಸ್'ನಿಂದ ದೂರ ಸರಿದಿದ್ದು `ಸಹೆಲ್ ರಾಷ್ಟ್ರಗಳ ಒಕ್ಕೂಟ'ವನ್ನು ಸ್ಥಾಪಿಸಿವೆ. ಅಲ್ಲದೆ ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ರಕ್ಷಣಾ ಸಹಕಾರವನ್ನು ಮೊಟಕುಗೊಳಿಸಿದ್ದು ರಶ್ಯದೊಂದಿಗೆ ನಿಕಟ ಸಂಬಂಧವನ್ನು ಬಯಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News