ನ್ಯೂಯಾರ್ಕ್ ಮೇಯರ್ ಹುದ್ದೆ: ಡೆಮಾಕ್ರಟಿಕ್ ಪಕ್ಷದ ಚುನಾವಣೆಯಲ್ಲಿ ಭಾರತೀಯ ಚಿತ್ರ ನಿರ್ಮಾಪಕಿ ಮೀರಾ ನಾಯರ್ ಪುತ್ರನಿಗೆ ಗೆಲುವು
ಝೊಹ್ರಾನ್ ಮಮ್ದಾನಿ (Photo: AP)
ನ್ಯೂಯಾರ್ಕ್: ನ್ಯೂಯಾರ್ಕ್ ನಗರದ ಮೇಯರ್ ಹುದ್ದೆಗೆ ನಡೆದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಚುನಾವಣೆಯಲ್ಲಿ ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿ ಅವರು ಆಯ್ಕೆಯಾಗಿದ್ದಾರೆ.
ನವೆಂಬರ್ ನಲ್ಲಿ ನಡೆಯಲಿರುವ ಮೇಯರ್ ಚುನಾವಣೆಯಲ್ಲಿ ಗೆದ್ದರೆ ಮಮ್ದಾನಿ ನ್ಯೂಯಾರ್ಕ್ ನಗರದ ಮೊದಲ ಮುಸ್ಲಿಂ ವಲಸೆ ಮೇಯರ್ ಆಗುವ ನಿರೀಕ್ಷೆಯಿದೆ.
ನ್ಯೂಯಾರ್ಕ್ ರಾಜ್ಯ ವಿಧಾನಸಭೆಯ ಪ್ರತಿನಿಧಿಯಾಗಿರುವ ಮಮ್ದಾನಿ, ತಮ್ಮನ್ನು "ಪ್ರಜಾಪ್ರಭುತ್ವವಾದಿ ಸಮಾಜವಾದಿ" ಮತ್ತು ಪ್ರಗತಿಪರ ಮತ್ತು ಕಾರ್ಮಿಕ ವರ್ಗದ ಮತದಾರರ ಆಯ್ಕೆಯಾಗಿ ತನ್ನನ್ನು ತಾನು ಪರಿಚಯಿಸಿಕೊಂಡಿದ್ದಾರೆ.
ಝೊಹ್ರಾನ್ ಮಮ್ದಾನಿ ಉಗಾಂಡಾ ಮೂಲದ ಮಹಮೂದ್ ಮಮ್ದಾನಿ ಮತ್ತು ಭಾರತೀಯ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಅವರ ಪುತ್ರ. ಉಗಾಂಡಾದ ಕಂಪಾಲಾದಲ್ಲಿ ಹುಟ್ಟಿ ಬೆಳೆದ ಅವರು, ಏಳನೇ ವಯಸ್ಸಿನಲ್ಲಿ ತಮ್ಮ ಹೆತ್ತವರೊಂದಿಗೆ ನ್ಯೂಯಾರ್ಕ್‌ಗೆ ವಲಸೆ ಬಂದರು.
2018 ರಲ್ಲಿ ಯುಎಸ್ ಪೌರತ್ವ ಪಡೆದ ಅವರು, ಈ ವರ್ಷದ ಆರಂಭದಲ್ಲಿ ಸಿರಿಯನ್ ಕಲಾವಿದೆಯನ್ನು ವಿವಾಹವಾಗಿದ್ದಾರೆ.