×
Ad

ಮೆಕ್ಸಿಕೋ: ಮಳೆ, ಪ್ರವಾಹದಲ್ಲಿ 28 ಮಂದಿ ಮೃತ್ಯು

Update: 2025-10-11 19:59 IST

Photo : timesofindia

ಮೆಕ್ಸಿಕೋ ಸಿಟಿ, ಅ.11: ಮಧ್ಯ ಮತ್ತು ಈಶಾನ್ಯ ಮೆಕ್ಸಿಕೋದಲ್ಲಿ ಧಾರಾಕಾರ ಮಳೆಯಿಂದ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು ವ್ಯಾಪಕ ನಾಶ ನಷ್ಟ ಉಂಟಾಗಿದೆ. ಕನಿಷ್ಠ 28 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಮಧ್ಯ ಮೆಕ್ಸಿಕೋದ ಹಿಡಾಲ್ಗೋ ರಾಜ್ಯದಲ್ಲಿ ಅತೀ ಹೆಚ್ಚಿನ ಸಾವು ನೋವು ಸಂಭವಿಸಿದ್ದು 16 ಮಂದಿ ಸಾವನ್ನಪ್ಪಿರುವ ವರದಿಯಾಗಿದೆ.

ಭೂಕುಸಿತದಿಂದ ಕನಿಷ್ಠ 1000 ಮನೆಗಳು, 308 ಶಾಲೆಗಳಿಗೆ ಹಾನಿಯಾಗಿದ್ದು ವಿದ್ಯುತ್ ಸಂಪರ್ಕ ಮೊಟಕುಗೊಂಡಿದೆ. ನೆರೆಯ ಪುಯೆಬ್ಲಾ ರಾಜ್ಯದಲ್ಲಿ 9 ಮಂದಿ ಸಾವನ್ನಪ್ಪಿದ್ದು 13 ಮಂದಿ ನಾಪತ್ತೆಯಾಗಿದ್ದಾರೆ. ಪ್ರತ್ಯೇಕ ಪ್ರಕರಣಗಳಲ್ಲಿ 3 ಮಂದಿ ಸಾವನ್ನಪ್ಪಿರುವ ವರದಿಯಿದೆ. ಭೂಕುಸಿತದಿಂದ ಗ್ಯಾಸ್ ಪೈಪ್ಲೈನ್ಗೆ ವ್ಯಾಪಕ ಹಾನಿಯಾಗಿದ್ದು ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ 8,700 ಮಿಲಿಟರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News