×
Ad

ಇರಾನ್ ಎಂದೂ ಶರಣಾಗದ ದೇಶವೆಂಬುದು ಇತಿಹಾಸ ಬಲ್ಲವರಿಗೆ ತಿಳಿದಿದೆ: ಖಾಮಿನೈ

Update: 2025-06-24 21:11 IST

ಖಾಮಿನೈ | PC : X \ @khamenei_ir

ಟೆಹರಾನ್: ಇರಾನ್ ಹಾಗೂ ಇಸ್ರೇಲ್ ದೇಶಗಳು ಕದನವಿರಾಮಕ್ಕೆ ಸಮ್ಮತಿಸಿವೆಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಕೆಲವು ತಾಸುಗಳ ಬಳಿಕ ಇರಾನ್ನ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಾಮಿನೈ ಅವರು ಹೇಳಿಕೆಯೊಂದನ್ನು ನೀಡಿ, ಇರಾನ್ ಎಂದೂ ಶರಣಾಗದ ರಾಷ್ಟ್ರವೆಂದು ಹೇಳಿದ್ದಾರೆ.

‘‘ ಇರಾನ್ ಎಂದೂ ಶರಣಾಗತವಾದ ರಾಷ್ಟ್ರವೆಂದು, ಇರಾನ್ನ ಜನತೆ ಹಾಗೂ ಅವರ ಇತಿಹಾಸವನ್ನು ಅರಿತವರಿಗೆ ತಿಳಿದಿದೆ.ನಾವು ಯಾರಿಗೂ ಹಾನಿ ಮಾಡಿಲ್ಲ. ಆದರೆ ಯಾವುದೇ ಸನ್ನಿವೇಶದಲ್ಲಿಯೂ ಯಾರಿಂದಲೂ ಕಿರುಕುಳಕ್ಕೊಳಗಾಗುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ ’’ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News