ಗಾಝಾ ಆಸ್ಪತ್ರೆಯಲ್ಲಿನ `ದುರ್ಘಟನೆ'ಗೆ ಇಸ್ರೇಲ್ ವಿಷಾದಿಸುತ್ತದೆ: ನೆತನ್ಯಾಹು
Update: 2025-08-26 21:09 IST
PC : REUTERS
ಜೆರುಸಲೇಂ, ಆ.26: ಗಾಝಾ ಪಟ್ಟಿಯ ದಕ್ಷಿಣದ ನಾಸೆರ್ ಆಸ್ಪತ್ರೆಯಲ್ಲಿ ಸೋಮವಾರ ಸಂಭವಿಸಿದ `ದುರಂತ ದುರ್ಘಟನೆಗೆ' ಇಸ್ರೇಲ್ ತೀವ್ರವಾಗಿ ವಿಷಾದಿಸುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಹೇಳಿದ್ದಾರೆ.
` ನಮ್ಮ ಯುದ್ಧವು ಹಮಾಸ್ ಗುಂಪಿನೊಂದಿದೆ. ಹಮಾಸ್ ಅನ್ನು ಸೋಲಿಸುವುದು ಮತ್ತು ನಮ್ಮ ಒತ್ತೆಯಾಳುಗಳನ್ನು ಸ್ವದೇಶಕ್ಕೆ ಕರೆತರುವುದಷ್ಟೇ ನಮ್ಮ ಉದ್ದೇಶವಾಗಿದೆ. ಆಸ್ಪತ್ರೆಯಲ್ಲಿ ಸಂಭವಿಸಿದ `ದುರ್ಘಟನೆಯ' ಬಗ್ಗೆ ತನಿಖೆಗೆ ಚಾಲನೆ ನೀಡಲಾಗಿದೆ.
ಪತ್ರಕರ್ತರು, ವೈದ್ಯಕೀಯ ಸಿಬ್ಬಂದಿ ಮತ್ತು ಎಲ್ಲಾ ನಾಗರಿಕರ ಕಾರ್ಯವನ್ನು ಇಸ್ರೇಲ್ ಗೌರವಿಸುತ್ತದೆ' ಎಂದು ಇಸ್ರೇಲ್ ಪ್ರಧಾನಿ ಕಚೇರಿಯ ಹೇಳಿಕೆ ತಿಳಿಸಿದೆ.