×
Ad

ನೆದರ್ ಲ್ಯಾಂಡ್ಸ್ ಚುನಾವಣೆ: ಬಹುಮತದತ್ತ ದಾಪುಗಾಲಿಟ್ಟ ಇಸ್ಲಾಮ್ ವಿರೋಧಿ ರಾಜಕಾರಣಿ

Update: 2023-11-23 18:36 IST

ಗೀರ್ತ್ ವೈಲ್ಡರ್ಸ್ | Photo: @geertwilderspvv | X

ಆ್ಯಮ್ ಸ್ಟರ್ ಡ್ಯಾಮ್: ಬಲಪಂಥೀಯ ಹಾಗೂ ಇಸ್ಲಾಂ ವಿರೋಧಿ ರಾಜಕಾರಣಿ ಗೀರ್ತ್ ವೈಲ್ಡರ್ಸ್ ಬುಧವಾರ ಲೋಕಸಭಾ ಚುನಾವಣೆಯಲ್ಲಿ ಭಾರಿ ಬಹುಮತದತ್ತ ಮುಖ ಮಾಡಿದ್ದು, ಎರಡನೆಯ ವಿಶ್ವ ಯುದ್ಧದ ನಂತರ ನೆದರ್ ಲ್ಯಾಂಡ್ಸ್ ರಾಜಕಾರಣದಲ್ಲಿ ಬಹು ದೊಡ್ಡ ಬದಲಾವಣೆ ಆಗಿದೆ. ವೈಲ್ಡರ್ಸ್ ರಾಜಕೀಯ ಬೆಳವಣಿಗೆ ಯೂರೋಪ್ ನಲ್ಲಿ ಕಳವಳ ಸೃಷ್ಟಿಸಿದೆ ಎಂದು ವರದಿಯಾಗಿದೆ.

ಈ ಫಲಿತಾಂಶವು ಮೈತ್ರಿಕೂಟ ಸರ್ಕಾರದ ಮಾತುಕತೆ ನಡೆಸಲು ಅವರಿಗೆ ಬಾಗಿಲು ತೆರೆದಿದ್ದು, ದೇಶದ ಪ್ರಪ್ರಥಮ ಬಲಪಂಥೀಯ ಪ್ರಧಾನಿಯಾಗಲಿದ್ದಾರೆ.

ರಾಷ್ಟ್ರೀಯ ಸುದ್ದಿ ಸಂಸ್ಥೆ NOSನ ಮತಗಟ್ಟೆ ಸಮೀಕ್ಷೆ ಪ್ರಕಾರ, 150 ಸದಸ್ಯ ಬಲದ ಲೋಕಸಭೆಯಲ್ಲಿ ವೈಲ್ಡರ್ಸ್ ರ ಪಾರ್ಟಿ ಫಾರ್ ಫ್ರೀಡಂ 35 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕಳೆದ ಬಾರಿ ಕೇವಲ 17 ಸ್ಥಾನಗಳಲ್ಲಿ ಜಯಿಸಿದ್ದ ಅವರ ಪಕ್ಷವು ಈ ಬಾರಿ ಅದರ ಎರಡು ಪಟ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಅಂತಿಮ ಅಧಿಕೃತ ಫಲಿತಾಂಶಗಳು ಇನ್ನಷ್ಟೇ ಪ್ರಕಟವಾಗಬೇಕಾಗಿದೆ.

ನೆದರ್ ಲ್ಯಾಂಡ್ಸ್ ಅನ್ನು ಇಸ್ಲಾಂ ಮುಕ್ತಗೊಳಿಸಬೇಕು ಎಂದು ವೈಲ್ಡರ್ಸ್ ಪ್ರತಿಪಾದಿಸುತ್ತಾ ಬರುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News