×
Ad

ಪರಮಾಣು ನಿಶ್ಯಸ್ತೀಕರಣ ಒತ್ತಾಯ ನಿಲ್ಲಿಸಿದರೆ ಅಮೆರಿಕ ಜೊತೆ ಮಾತುಕತೆಗೆ ಸಿದ್ಧ: ಉತ್ತರ ಕೊರಿಯಾ

Update: 2025-09-22 21:17 IST

ಕಿಮ್ ಜೋಂಗ್ ಉನ್ | PC : PTI 

ಪ್ಯೋಂಗ್ಯಾಂಗ್, ಸೆ.22: ಪರಮಾಣು ಅಸ್ತ್ರಗಳನ್ನು ತ್ಯಜಿಸುವಂತೆ ಒತ್ತಾಯಿಸುವುದನ್ನು ಅಮೆರಿಕ ನಿಲ್ಲಿಸಿದರೆ ಆ ದೇಶದೊಂದಿಗೆ ಮಾತುಕತೆ ನಿರಾಕರಿಸಲು ಯಾವುದೇ ಕಾರಣಗಳಿಲ್ಲ ಎಂದು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೋಂಗ್ ಉನ್ ಹೇಳಿರುವುದಾಗಿ ಸರ್ಕಾರಿ ಸ್ವಾಮ್ಯದ ಕೆಸಿಎನ್‍ಎ ಸೋಮವಾರ ವರದಿ ಮಾಡಿದೆ.

ನಮ್ಮನ್ನು ಪರಮಾಣು ನಿಶ್ಯಸ್ತ್ರೀಕರಣಗೊಳಿಸುವ ಅಸಂಬದ್ಧ ಕಿರಿಕಿರಿಯನ್ನು ಅಮೆರಿಕ ಕೊನೆಗೊಳಿಸಿ ವಾಸ್ತವವನ್ನು ಒಪ್ಪಿಕೊಂಡರೆ ಮತ್ತು ನಮ್ಮೊಂದಿಗೆ ಶಾಂತಿಯುತ ಸಹಬಾಳ್ವೆಗೆ ನಿಜವಾಗಿಯೂ ಬಯಸುವುದಾದರೆ ಮಾತುಕತೆಗೆ ನಮ್ಮ ಅಭ್ಯಂತರವೇನೂ ಇಲ್ಲ. ಅಮೆರಿಕದ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ಸವಿ ನೆನಪುಗಳನ್ನು ಹೊಂದಿದ್ದೇನೆ ಎಂದು ಕಿಮ್ ಹೇಳಿರುವುದಾಗಿ ವರದಿಯಾಗಿದೆ.

ಟ್ರಂಪ್ ಅವರ ಮೊದಲ ಅವಧಿಯಲ್ಲಿ ಅವರೊಂದಿಗೆ ಕಿಮ್ ಮೂರು ಬಾರಿ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪರಮಾಣು ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಒಂದು ದೇಶವನ್ನು ಒತ್ತಾಯಿಸಿದ ಬಳಿಕ ಅಮೆರಿಕ ಏನು ಮಾಡುತ್ತದೆ ಎಂಬುದನ್ನು ಈಗಾಗಲೇ ಜಗತ್ತು ತಿಳಿದಿದೆ. ನಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಎಂದಿಗೂ ತ್ಯಜಿಸುವುದಿಲ್ಲ. ನಿರ್ಬಂಧಗಳು ನಮ್ಮನ್ನು ಬಲಿಷ್ಟವಾಗಿ ಬೆಳೆಯಲು, ಯಾವುದೇ ಒತ್ತಡಕ್ಕೆ ಜಗ್ಗದ ಸಹಿಷ್ಣುತೆ ಮತ್ತು ಪ್ರತಿರೋಧವನ್ನು ನಿರ್ಮಿಸಲು ಸಹಾಯ ಮಾಡುತ್ತವೆ' ಎಂದು ಕಿಮ್‍ ರನ್ನು ಉಲ್ಲೇಖಿಸಿ ಕೆಸಿಎನ್‍ಎ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News