ಉತ್ತರ ಮ್ಯಾಸಿಡೋನಿಯಾ: ಬೆಂಕಿ ದುರಂತದಲ್ಲಿ ಕನಿಷ್ಠ 15 ಸಾವು
Update: 2025-03-16 20:15 IST
ಸಾಂದರ್ಭಿಕ ಚಿತ್ರ | PC : freepik.com
ಸ್ಕೋಪ್ಜೆ: ಉತ್ತರ ಮ್ಯಾಸಿಡೋನಿಯಾದ ನೈಟ್‍ಕ್ಲಬ್‍ನಲ್ಲಿ ರವಿವಾರ ನಡೆದ ಬೆಂಕಿ ದುರಂತದಲ್ಲಿ ಕನಿಷ್ಟ 51 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿರುವುದಾಗಿ ಆಂತರಿಕ ಸಚಿವರನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ರವಿವಾರ ವರದಿ ಮಾಡಿದೆ.
ರಾಜಧಾನಿ ಸ್ಕೋಪ್ಜೆಯ ಬಳಿಯಿರುವ ಕೊಕಾನಿ ನಗರದ ನೈಟ್‍ಕ್ಲಬ್‍ನಲ್ಲಿ ಸುಮಾರು 1,5000 ಮಂದಿ ಭಾಗವಹಿಸಿದ್ದ ಸಂಗೀತ ಕಚೇರಿ ಸಂದರ್ಭ ದುರಂತ ಸಂಭವಿಸಿದೆ. ರವಿವಾರ ಮಧ್ಯರಾತ್ರಿಯ ಬಳಿಕ ಆರಂಭಗೊಂಡ ಸಂಗೀತಕಚೇರಿಯಲ್ಲಿ ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸಂಗೀತ ಕಚೇರಿಯ ವಿಶೇಷ ಆಕರ್ಷಣೆಯಾಗಿ ಏರ್ಪಡಿಸಿದ ಬಾಣಬಿರುಸು ಪ್ರದರ್ಶನ ದುರಂತಕ್ಕೆ ಕಾರಣ. ಪಟಾಕಿ ಸಿಡಿಸಿದಾಗ ಹಾರಿದ ಕಿಡಿ ವೇದಿಕೆಯ ಬಟ್ಟೆಗೆ ಸಿಡಿದು ಕ್ಷಣಮಾತ್ರದಲ್ಲಿ ಸಭಾಂಗಣಕ್ಕೆ ವ್ಯಾಪಿಸಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.