×
Ad

ಪಾಕಿಸ್ತಾನ: ಕುಟುಂಬದ 13 ಸದಸ್ಯರಿಗೆ ವಿಷ ಹಾಕಿ ಸಾಯಿಸಿದ ಯುವತಿಯ ಬಂಧನ

Update: 2024-10-07 20:40 IST

ಸಾಂದರ್ಭಿಕ ಚಿತ್ರ

ಇಸ್ಲಮಾಬಾದ್ : ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ಯುವತಿಯೊಬ್ಬಳು ತಾನು ಇಷ್ಟಪಟ್ಟ ಯುವಕನನ್ನು ಮದುವೆಯಾಗಲು ವಿರೋಧಿಸಿದ ಕುಟುಂಬದ 13 ಸದಸ್ಯರನ್ನು ವಿಷ ಉಣಿಸಿ ಹತ್ಯೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿ ಯುವತಿ ಮತ್ತು ಆಕೆಯ ಸ್ನೇಹಿತನನ್ನು ಬಂಧಿಸಲಾಗಿದೆ. ಸಿಂಧ್ ಪ್ರಾಂತದ ಹೈಬತ್ ಖಾನ್ ಬ್ರೊಹಿ ಗ್ರಾಮದ ನಿವಾಸಿಯಾಗಿರುವ ಯುವತಿ ತಾನು ಪ್ರೀತಿಸುತ್ತಿದ್ದ ಯುವಕನನ್ನು ಮದುವೆಯಾಗಲು ನಿರ್ಧರಿಸಿದ್ದು ಇದಕ್ಕೆ ಆಕೆಯ ಕುಟುಂಬದವರು ಸಮ್ಮತಿಸಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆಕೆ ಸ್ನೇಹಿತನ ಜತೆ ಸೇರಿಕೊಂಡು ಊಟದಲ್ಲಿ ವಿಷ ಬೆರಸಿದ್ದಾಳೆ. ಊಟ ಮಾಡಿದ ಯುವತಿಯ ಪೋಷಕರು ಸೇರಿದಂತೆ ಕುಟುಂಬದ 13 ಸದಸ್ಯರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ವಿಷಾಹಾರ ಸೇವನೆಯಿಂದ ಸಾವು ಸಂಭವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಸ್ನೇಹಿತನ ನೆರವಿನಿಂದ ಯುವತಿ ವಿಷ ಹಾಕಿರುವುದು ಬೆಳಕಿಗೆ ಬಂದಿದೆ. ಯುವತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News