ಪಾಕಿಸ್ತಾನ | ಮತ್ತೆ ಎರಡು ಪೋಲಿಯೊ ಪ್ರಕರಣ ವರದಿ
Update: 2024-11-03 22:14 IST
PC : ANI
ಇಸ್ಲಾಮಾಬಾದ್ : ಪಾಕಿಸ್ತಾನದ ವಾಯವ್ಯ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ 2 ಪೋಲಿಯೊ ಪ್ರಕರಣ ವರದಿಯಾಗಿದ್ದು ಇದರೊಂದಿಗೆ ದೇಶದಲ್ಲಿ ಈ ವರ್ಷ ವರದಿಯಾದ ಪೋಲಿಯೊ ಪ್ರಕರಣಗಳ ಸಂಖ್ಯೆ 45ಕ್ಕೇರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಲಕ್ಕಿ ಮರ್ವಾತ್ ಜಿಲ್ಲೆಯಲ್ಲಿ ಒಬ್ಬಳು ಬಾಲಕಿಯಲ್ಲಿ ಹಾಗೂ ಡೇರ ಇಸ್ಮಾಲಿಖಾನ್ ಜಿಲ್ಲೆಯಲ್ಲಿ ಒಬ್ಬ ಬಾಲಕನಲ್ಲಿ ಪೋಲಿಯೊ ಪ್ರಕರಣ ದೃಢಪಟ್ಟಿದೆ.
ಇದುವರೆಗೆ ಬಲೂಚಿಸ್ತಾನ ಪ್ರಾಂತದಲ್ಲಿ 22 ಪೋಲಿಯೊ ಪ್ರಕರಣ, ಸಿಂಧ್ ಪ್ರಾಂತದಲ್ಲಿ 12, ಖೈಬರ್ ಪಖ್ತೂಂಕ್ವಾದಲ್ಲಿ 9, ಪಂಜಾಬ್ ಪ್ರಾಂತ ಮತ್ತು ಇಸ್ಲಾಮಾಬಾದ್‍ನಲ್ಲಿ ತಲಾ 1 ಪ್ರಕರಣ ದೃಢಪಟ್ಟಿದೆ ಎಂದು ಪಾಕಿಸ್ತಾನದ ಪೋಲಿಯೊ ನಿರ್ಮೂಲನ ಕಾರ್ಯಕ್ರಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.