×
Ad

ಪಾಕ್ ಸೇನಾ ಮುಖ್ಯಸ್ಥರಿಗೆ ಅಮೆರಿಕದಲ್ಲಿ ಪ್ರತಿಭಟನೆಯ ಬಿಸಿ

Update: 2025-06-17 21:16 IST

 ಅಸಿಮ್ ಮುನೀರ್ | PC : indiatoday.in 

ವಾಷಿಂಗ್ಟನ್: ಅಮೆರಿಕಕ್ಕೆ ಭೇಟಿ ನೀಡಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಪಾಕಿಸ್ತಾನೀ ಪ್ರಜೆಗಳಿಂದ ಪ್ರತಿಭಟನೆಯಿಂದಾಗಿ ಮುಜುಗುರಕ್ಕೆ ಒಳಗಾದ ಘಟನೆ ವರದಿಯಾಗಿದೆ.

ವಾಷಿಂಗ್ಟನ್‍ನಲ್ಲಿ ಮುನೀರ್ ಉಳಿದುಕೊಂಡಿದ್ದ ಹೋಟೆಲ್‍ನ ಬಳಿ ಸೇರಿದ ಪಾಕ್ ಪ್ರಜೆಗಳು ಹಾಗೂ ಪಾಕಿಸ್ತಾನ ಮೂಲದ ಜನರು `ಆಸಿಮ್ ಮುನೀರ್, ನೀವೊಬ್ಬ ಹೇಡಿ' `ಸಾಮೂಹಿಕ ಕೊಲೆಗಾರ, ನಿಮಗೆ ನಾಚಿಕೆಯಾಗಬೇಕು', `ಪಾಕಿಸ್ತಾನೀಯರ ಕೊಲೆಗಾರ' ಇತ್ಯಾದಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಮತ್ತೊಂದು ವೀಡಿಯೋದಲ್ಲಿ ಹೋಟೆಲ್ ಕಟ್ಟಡದ ಬಳಿ ನಿಲ್ಲಿಸಿದ್ದ ಇಲೆಕ್ಟ್ರಾನಿಕ್ ಬಿಲ್‍ಬೋರ್ಡ್‍ನಲ್ಲಿ `ಆಸಿಮ್ ಮುನೀರ್, ಸರ್ವಾಧಿಕಾರಿ' `ನರಿ ಬುದ್ಧಿಯ ಮುನೀರ್' `ಬಂದೂಕುಗಳು ಮಾತನಾಡುವಾಗ ಪ್ರಜಾಪ್ರಭುತ್ವ ಸಾಯುತ್ತದೆ' ಎಂಬ ಘೋಷಣೆಗಳನ್ನು ಪ್ರದರ್ಶಿಸಲಾಗಿತ್ತು. ಪ್ರತಿಭಟನೆಯನ್ನು ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷ ಆಯೋಜಿಸಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News