ತೀವ್ರಗೊಂಡ ಸಂಘರ್ಷ | ಇರಾನ್ ನೊಂದಿಗಿನ ಗಡಿ ಮುಚ್ಚಿದ ಪಾಕಿಸ್ತಾನ
Update: 2025-06-16 22:30 IST
ಇಸ್ಲಮಾಬಾದ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವಂತೆಯೇ ನೆರೆಯ ಇರಾನ್ ನೊಂದಿಗಿನ ತನ್ನ ಎಲ್ಲಾ ಗಡಿದಾಟುಗಳನ್ನು ಪಾಕಿಸ್ತಾನ ಮುಚ್ಚಿರುವುದಾಗಿ ವರದಿಯಾಗಿದೆ.
ಛಾಘಿ, ವಷುಕ್, ಪಂಜ್ಗರ್, ಕೆಛ್ ಮತ್ತು ಗ್ವದರ್ ಜಿಲ್ಲೆಗಳಲ್ಲಿನ ಗಡಿ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಇರಾನ್ಗೆ ಗಡಿ ದಾಟುವುದನ್ನು ಮುಂದಿನ ಸೂಚನೆಯವರೆಗೆ ಅಮಾನತುಗೊಳಿಸಲಾಗಿದೆ. ಆದರೆ ಗಡಿಯಲ್ಲಿ ವ್ಯಾಪಾರ ಚಟುವಟಿಕೆಗಳನ್ನು ನಿಷೇಧಿಸಲಾಗಿಲ್ಲ ಮತ್ತು ಇರಾನ್ ನಿಂದ ತಮ್ಮ ದೇಶಕ್ಕೆ ಹಿಂತಿರುಗಲು ಬಯಸುವ ಪಾಕ್ ಪ್ರಜೆಗಳು ಗಡಿದಾಟಬಹುದು ಎಂದು ಇರಾನ್ ಗಡಿಯಲ್ಲಿರುವ ಬಲೂಚಿಸ್ತಾನ್ ಪ್ರಾಂತದ ಹಿರಿಯ ಅಧಿಕಾರಿಯನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.