×
Ad

ಕಾಶ್ಮೀರದಲ್ಲಿನ ಪಾಕಿಸ್ತಾನದ ಆಕ್ರಮಣವನ್ನು ವಿಶ್ವಸಂಸ್ಥೆ ವ್ಯಾಜ್ಯವನ್ನಾಗಿಸಿತು: ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್

Update: 2025-03-18 14:37 IST

Photo : PTI

ಹೊಸದಿಲ್ಲಿ: ಸಾರ್ವಭೌಮತೆ ಹಾಗೂ ಪ್ರಾಂತೀಯ ಸಮಗ್ರತೆಗೆ ಸಂಬಂಧಿಸಿದ ವಿಷಯಗಳಿಗೆ ಅನ್ವಯಿಸುವ ಕೆಲವು ಆಯ್ದ ಜಾಗತಿಕ ನಿಯಮಗಳನ್ನು ಉಲ್ಲೇಖಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಎರಡನೆ ವಿಶ್ವ ಯುದ್ಧದ ನಂತರ, ಭಾರತದಲ್ಲಿನ ಕಾಶ್ಮೀರದ ಪ್ರಾಂತ್ಯವೊಂದು ಸುದೀರ್ಘ ಕಾಲದಿಂದ ಅಕ್ರಮ ವಶಕ್ಕೊಳಪಟ್ಟಿದೆ ಎಂದು ತಿಳಿಸಿದರು.

ರೈಸಿನಾ ಮಾತುಕತೆಯಲ್ಲಿ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲವು ವಿಷಯಗಳನ್ನು ನಿಭಾಯಿಸುವಾಗ ಭಾರತಕ್ಕೆ ಐತಿಹಾಸಿಕ ಅನ್ಯಾಯವಾಗಿದ್ದು, ಬಲಿಷ್ಠ ಮತ್ತು ನ್ಯಾಯಯುತ ವಿಶ್ವಸಂಸ್ಥೆಯ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಪಾಕಿಸ್ತಾನದಿಂದಾಗಿರುವ ಕಾಶ್ಮೀರದ ಅಕ್ರಮ ಅತಿಕ್ರಮಣದ ಕುರಿತು ಉಲ್ಲೇಖಿಸಿದ ಅವರು, ದಾಳಿಕೋರ ಹಾಗೂ ಸಂತ್ರಸ್ತರಿಬ್ಬರನ್ನೂ ಒಂದೇ ಗುಂಪಿಗೆ ಸೇರ್ಪಡೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಎರಡನೆ ವಿಶ್ವ ಯುದ್ಧದ ನಂತರ, ಒಂದು ದೇಶವು ಮತ್ತೊಂದು ದೇಶದ ಪ್ರಾಂತ್ಯದೊಳಗೆ ಸುದೀರ್ಘ ಕಾಲದಿಂದ ಅಕ್ರಮ ಉಪಸ್ಥಿತಿಯನ್ನು ಹೊಂದಿರುವ ನಿದರ್ಶನವು ಭಾರತದಲ್ಲಿನ ಕಾಶ್ಮೀರಕ್ಕೆ ಸಂಬಂಧಿಸಿದ್ದಾಗಿದೆ” ಎಂದು ಅವರು ಹೇಳಿದರು.

“ನಾವು ಈ ಕುರಿತು ವಿಶ್ವಸಂಸ್ಥೆಯ ಮೊರೆ ಹೋದೆವು. ಆದರೆ, ಅಲ್ಲಿ ಆಕ್ರಮಣವನ್ನು ವ್ಯಾಜ್ಯವನ್ನಾಗಿ ಪರಿವರ್ತಿಸಲಾಯಿತು. ದಾಳಿಕೋರ ಹಾಗೂ ಸಂತ್ರಸ್ತರಿಬ್ಬರನ್ನೂ ಒಂದೇ ಬದಿಯಲ್ಲಿ ಕುಳ್ಳರಿಸಲಾಯಿತು” ಎಂದು ಅವರು ತಿಳಿಸಿದರು.

ಏಕರೂಪತೆಗಾಗಿ ಜಾಗತಿಕ ಮಾನದಂಡಗಳು ಹಾಗೂ ನಿಯಮಗಳನ್ನು ಅನ್ವಯಿಸಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

“ನಮಗೆ ಬಲಿಷ್ಠ ವಿಶ್ವಸಂಸ್ಥೆ ಬೇಕಿದೆ. ಆದರೆ, ಬಲಿಷ್ಠ ವಿಶ್ವಸಂಸ್ಥೆಗಾಗಿ ನ್ಯಾಯಯುತ ವಿಶ್ವಸಂಸ್ಥೆ ಬೇಕಿದೆ” ಎಂದೂ ಅವರು ಹೇಳಿದರು.

“ಬಲಿಷ್ಠ ಜಾಗತಿಕ ಆದೇಶವೊಂದು ಒಂದಿಷ್ಟು ಮೂಲಭೂತ ಪ್ರಮಾಣೀಕೃತ ಸ್ಥಿರತೆಯನ್ನಾದರೂ ಹೊಂದಿರಬೇಕು” ಎಂದೂ ಅವರು ಅಭಿಪ್ರಾಯಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News