×
Ad

ಪಾಕಿಸ್ತಾನದಲ್ಲಿ ಹಳಿರಹಿತ ಮೆಟ್ರೋ ರೈಲು!

Update: 2025-07-30 22:34 IST

Image: @MaryamNSharif/X

ಇಸ್ಲಾಮಾಬಾದ್,ಜು.30: ಪಾಕಿಸ್ತಾನದ ಪ್ರಪ್ರಥಮ ಹಳಿರಹಿತ ಹಾಗೂ ಸೌರಶಕ್ತಿ ಚಾಲಿತ ಮೆಟ್ರೋ ರೈಲು ಬುಧವಾರ ಲಾಹೋರ್ ನಲ್ಲಿ ಕಾರ್ಯಾರಂಭಿಸಿದೆ. ಚೀನಾ ನಿರ್ಮಿತ ಈ ಹಳಿರಹಿತ ಮೆಟ್ರೋ ರೈಲು ವ್ಯವಸ್ಥೆ ದಕ್ಷಿಣ ಏಶ್ಯದಲ್ಲೇ ಪ್ರಪ್ರಥಮವೆಂದು ಪಾಕ್ ಸರಕಾರದ ಹೇಳಿಕೆ ತಿಳಿಸಿದೆ.

ನಗರ ಸಾರಿಗೆಯನ್ನು ಆಧುನೀಕರಿಸುವ ಹಾಗೂ ಈ ವ್ಯವಸ್ಥೆಯನ್ನು 30 ನಗರಗಳಲ್ಲಿ ನಿಯೋಜಿಸುವ ಪಂಜಾಬ್ ಪ್ರಾಂತದ ಯೋಜನೆಯನ್ನು ಪಂಜಾಬ್ ಪ್ರಾಂತಾಡಳಿತ ಹೊಂದಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಮರಿಯಮ್ ನವಾಝ್ ಶರೀಫ್, ಇಂತಹ ಕ್ಷಿಪ್ರ ಹಳಿರಹಿತ ರೈಲು ವ್ಯವಸ್ಥೆಯು ದಕ್ಷಿಣ ಏಶ್ಯದಲ್ಲೇ ಪ್ರಪ್ರಥಮವಾದುದಾಗಿದೆ. ಸಾಂಪ್ರದಾಯಿಕ ಸಾರಿಗೆಗೆ ಪರ್ಯಾಯವಾಗಿ ಆಧುನಿಕ, ಮಿತವೆಚ್ಚದ ಹಾಗೂ ಪರಿಸರ ಸ್ನೇಹಿಯಾದ ಈ ರೈಲು ವ್ಯವಸ್ಥೆಯು ದಕ್ಷಿಣ ಏಶ್ಯದಲ್ಲೇ ಪ್ರಪ್ರಥಮವೆಂದು ಹೇಳಿದ್ದಾರೆ.

‘‘ದಕ್ಷಿಣ ಏಶ್ಯದ ಪ್ರಪ್ರಥಮ ಎ ಆರ್‍ ಟಿ( ಸ್ವಾಯತ್ತ ರೈಲು ತ್ವರಿತ ಸಾರಿಗೆ) ಲಾಹೋರ್ ಗೆ ಆಗಮಿಸಿದೆ. ಇದು ಹಳಿರಹಿತವಾಗಿದೆ. ರಬ್ಬರ್ ಟೆರ್ ಗಳನ್ನು ಹೊಂದಿರುವ ಈ ರೈಲು 300 ಪ್ರಯಾಣಿಕರನ್ನು ಒಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಅತ್ಯಾಧುನಿಕ, ಮಿತವೆಚ್ಚದ ಹಾಗೂ ಪರಿಸರ ಸ್ನೇಹಿ ರೈಲು ಸಾಂಪ್ರದಾಯಿಕ ಸಾರಿಗೆಗೆ ಪರ್ಯಾಯವಾಗಿದೆ. ಶೀಘ್ರದಲ್ಲೇ ಅದು ಕ್ಯಾನಲ್ ರಸ್ತೆಯಲ್ಲಿ ಪರೀಕ್ಷಾರ್ಥ ಓಡಾಟವನ್ನು ನಡೆಸಲಿದೆ. ಇನ್ಶಾ ಅಲ್ಲಾಹ್!’’ ಎಂದು ಶರೀಫ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಎ ಟಿ ಆರ್ ರೈಲಿನ ಪ್ರಾಯೋಗಿಕ ಸಂಚಾರವು ಲಾಹೋರ್ ವಿಮಾನನಿಲ್ದಾಣದ ಸಮೀಪ ಆರಂಭಗೊಂಡಿದೆ. ಈ ಸಂದರ್ಭ ಪಾಕಿಸ್ತಾನ ಹಾಗೂ ಚೀನಾದ ಅಧಿಕಾರಿಗಳು ಭಾಗವಹಿಸಿದ್ದರು. ‘‘ ಇದು ಕೇವಲ ಪರೀಕ್ಷಾರ್ಥ ಸಂಚಾರವಾಗಿದೆ. ಇದು ಪಂಜಾಬ್‌ ನ ಭವಿಷ್ಯದ ಸಾರ್ವಜನಿಕ ಸಾರಿಗೆಯ ಪರೀಕ್ಷೆಯಾಗಿದೆ’’ ಎಂದು ಹಂಗಾಮಿ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News