×
Ad

ಮೇ 9ರ ಹಿಂಸಾಚಾರ ಪ್ರಕರಣ; ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಜಾಮೀನು ಮಂಜೂರು

Update: 2025-08-21 17:34 IST

 ಇಮ್ರಾನ್ ಖಾನ್ | PC : NDTV 

ಇಸ್ಲಾಮಬಾದ್: ಮೇ 9 ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಂಟನೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.

2023ರಂದು ದೇಶಾದ್ಯಂತ ನಡೆದಿದ್ದ ಪ್ರತಿಭಟನೆಗಳು ಹಾಗೂ ಸರಕಾರ ಮತ್ತು ಸೇನಾ ಕಟ್ಟಡಗಳ ಮೇಲೆ ನಡೆದಿದ್ದ ದಾಳಿ ಸಂಬಂಧಿಸಿದಂತೆ ಇಮ್ರಾನ್ ಖಾನ್ ವಿರುದ್ಧ ದಾಖಲಾಗಿದ್ದ ವಿವಿಧ ಪ್ರಕರಣಗಳ ವಿಚಾರಣೆಯ ವೇಳೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ.

ನ್ಯಾ. ಮುಹಮ್ಮದ್ ಶಫಿ ಸಿದ್ದಿಕಿ ಹಾಗೂ ನ್ಯಾ. ಮಿಯಾಂಗುಲ್ ಹಸನ್ ಔರಂಗ್ ಝೇಬ್ ಅವರನ್ನೊಳಗೊಂಡ ಮುಖ್ಯ ನ್ಯಾಯಮೂರ್ತಿ ಯಾಹ್ಯಾ ಅಫ್ರಿದಿ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ಜಾಮೀನು ಅರ್ಜಿಗಳ ವಿಚಾರಣೆ ನಡೆಸಲು ಈ ನ್ಯಾಯಪೀಠವನ್ನು ಪುನಾರಚಿಸಲಾಗಿದೆ ಎಂದು Dawn ವರದಿ ಮಾಡಿದೆ.

ಆದರೆ, ಈ ಜಾಮೀನಿನ ಹೊರತಾಗಿಯೂ ಇಮ್ರಾನ್ ಖಾನ್ ಶೀಘ್ರದಲ್ಲೇ ಬಿಡುಗಡೆಯಾಗುವುದು ಅನುಮಾನಾಸ್ಪದವಾಗಿದೆ. 2023ರಿಂದ ಜೈಲಿನಲ್ಲಿರುವ ಇಮ್ರಾನ್ ಖಾನ್, ರಾಜ್ಯ ಉಡುಗೊರೆಗಳ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, 190 ದಶಲಕ್ಷ ಪೌಂಡ್ ಲಂಚ ಸ್ವೀಕರಿಸಿದ ಪ್ರಕರಣದಲ್ಲೂ ಶಿಕ್ಷೆ ಎದುರಿಸುತ್ತಿದ್ದಾರೆ.

ಮೇ 9ರ ಹಿಂಸಾಚಾರಕ್ಕೆ ಸಂಬಂಧಿಸಿದ ಅವರ ವಿರುದ್ಧದ ಇನ್ನೂ ಕೆಲವು ಪ್ರಕರಣಗಳ ವಿಚಾರಣೆ ಈಗಲೂ ಬಾಕಿ ಇವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News