×
Ad

ಫೆಲೆಸ್ತೀನ್ ಕೈದಿ ಬಗ್ಗೆ ಅಪಹಾಸ್ಯ: ಇಸ್ರೇಲ್ ಸಚಿವರನ್ನು ಖಂಡಿಸಿದ ವಿಶ್ವಸಂಸ್ಥೆ

Update: 2025-08-19 22:10 IST

PC :  X 

ಜಿನೆವಾ: ಫೆಲೆಸ್ತೀನ್ ಕೈದಿಯ ಬಗ್ಗೆ ಅಪಹಾಸ್ಯ ಮಾಡಿದ ವೀಡಿಯೊ ದೃಶ್ಯಾವಳಿಯ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಇಸ್ರೇಲ್‍ನ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್‍ಗ್ವಿರ್ ನಡೆಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಏಜೆನ್ಸಿ ಮಂಗಳವಾರ ಖಂಡಿಸಿದೆ.

ಇಸ್ರೇಲ್‍ನ ಜೈಲಿನಲ್ಲಿ ಬಂಧನದಲ್ಲಿರುವ `ಫೆಲೆಸ್ತೀನಿಯನ್ ಮಂಡೇಲಾ' ಎಂದೇ ಕರೆಸಿಕೊಳ್ಳುವ ಮರ್ವನ್ ಬರ್ಘೌಟಿಯ ಜೊತೆ ಮಾತಿನ ಚಕಮಕಿ ನಡೆಸಿದ್ದ ಸಚಿವ ಬೆನ್‍ಗ್ವಿರ್, ಬರ್ಘೌಟಿ ಕಸ್ಟಡಿಯಲ್ಲಿರುವ ವೀಡಿಯೊವನ್ನು ಆನ್‍ಲೈನ್‍ನಲ್ಲಿ ಪೋಸ್ಟ್ ಮಾಡಿ ಅಪಹಾಸ್ಯ ಮಾಡಿದ್ದರು. `ಸಚಿವರ ವರ್ತನೆ ಮತ್ತು ವೀಡಿಯೊ ತುಣುಕನ್ನು ಪ್ರಸಾರ ಮಾಡಿರುವುದು ಬರ್ಘೌಟಿಯ ಘನತೆಯ ಮೇಲಿನ ದಾಳಿಯಾಗಿದೆ. ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಬಂಧನದಲ್ಲಿರುವ ಎಲ್ಲರನ್ನೂ ಮಾನವೀಯವಾಗಿ, ಘನತೆಯಿಂದ ಪರಿಗಣಿಸಬೇಕು ಮತ್ತು ಅವರ ಮಾನವ ಹಕ್ಕುಗಳನ್ನು ಗೌರವಿಸಬೇಕು ಮತ್ತು ರಕ್ಷಿಸಬೇಕು ' ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಏಜೆನ್ಸಿಯ ವಕ್ತಾರ ಥಮೀನ್ ಅಲ್-ಖೀತಾನ್ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News