×
Ad

ಟೋಕಿಯೋ ವಿಮಾನ ನಿಲ್ದಾಣದ ರನ್-ವೇ ನಲ್ಲಿ 400 ಪ್ರಯಾಣಿಕರಿದ್ದ ವಿಮಾನಕ್ಕೆ ಬೆಂಕಿ

Update: 2024-01-02 15:30 IST

Photo credit: ca.news.yahoo.com

ಟೋಕಿಯೋ: ಟೋಕಿಯೋದ ಹನೇಡಾ ವಿಮಾನ ನಿಲ್ದಾಣದ ರನ್-ವೇ ನಲ್ಲಿ ಇಂದು ಪ್ರಯಾಣಿಕರಿದ್ದ ಜಪಾನ್‌ ಏರ್‌ಲೈನ್ಸ್‌ ವಿಮಾನವೊಂದಕ್ಕೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. ಕೋಸ್ಟ್‌ ಗಾರ್ಡ್‌ ವಿಮಾನಕ್ಕೆ ಢಿಕ್ಕಿ ಹೊಡೆದ ನಂತರ ಬೆಂಕಿ ಕಾಣಿಸಿಕೊಂಡಿತೆಂದು ಶಂಕಿಸಲಾಗಿದೆ.

ವಿಮಾನದ ಕಿಟಿಕಿಗಳಿಂದ ಬೆಂಕಿಯ ಜ್ವಾಲೆಗಳು ಹೊರ ಬರುತ್ತಿರುವುದು ಕಾಣಿಸುತ್ತಿರುವ ವೀಡಿಯೋಗಳನ್ನು ಎನ್‌ಎಚ್‌ಕೆ ಚಾನಲ್‌ ಪ್ರಸಾರ ಮಾಡಿದೆ.

ಹೊಕ್ಕಾಯಿಡೋದ ಶಿನ್-ಚಿತೋಸ್‌ ವಿಮಾನ ನಿಲ್ದಾಣದಿಂದ ಆಗಮಿಸಿದ್ದ ಈ ವಿಮಾನದಲ್ಲಿ 400 ಪ್ರಯಾಣಿಕರಿದ್ದಾರೆಂದು ಜಪಾನ್‌ ಏರ್‌ಲೈನ್ಸ್‌ ವಕ್ತಾರರು ಹೇಳಿದ್ದಾರೆ.

ಇನ್ನೊಂದು ವೀಡಿಯೋದಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ.

ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News